ಬೆಳಗಾವಿ ಜಿಲ್ಲೆಯ ಗಡಿ ತಾಲೂಕಿನಲ್ಲಿ ಧಾರಾಕಾರ ಮಳೆಗೆ ಅನೇಕ ರಸ್ತೆಗಳು ಮತ್ತು ಸೇತುವೆಗಳು ಮಳೆಯಲ್ಲಿ ಮುಳುಗಿ ಹೋಗಿದ್ದು, ಮೊಸಳೆಗಳು ಬಂದಿರುವುದಾಗಿ ಹೇಳುತ್ತಿದ್ದಂತೆ ಇಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಭೇಟಿ ನೀಡಿ ಪರಿಶೀಲಿಸಿದರು.
ಬೆಳಗಾವಿ ಗಡಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಲೀಕವಾಡ, ದಾನವಾಡ, ಬೋರಗಾಂವ ಹಾಗೂ ಸದಲಗಾ ಸಂಪರ್ಕ ರಸ್ತೆಗಳು ಮಳೆ ನೀರಿನಲ್ಲಿ ಮುಳುಗಡೆಯಾಗಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ನೀರಿನಲ್ಲಿ ಮೊಸಳೆಗಳು ತೇಲಿ ಬಂದಿರುವ ಭಯ ಗ್ರಾಮಸ್ಥರಲ್ಲಿ ಮೂಡಿದೆ. ಈ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಭೇಟಿ ನೀಡಿ ಪರಿಶೀಲಿಸಿದರು.
ಎನ್.ಡಿ.ಆರ್.ಎಫ್ ತಂಡದಿಂದ ಮಾಹಿತಿ ಪಡೆದ ಅವರು ಮಳೆಯಿಂದ ಸುರಕ್ಷಿತವಾಗಿರಲು ಜಾಕೇಟಗಳನ್ನು ವಿತರಿಸಿದರು. ಜನರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿ ಹೇಳಿದರು.