ರಾಯಬಾಗ ವಿಧಾನಸಭೆ ಕ್ಷೇತ್ರದ ಪ್ರತಿವೊಂದು ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುವದು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಕರೋಶಿ-ಕಮತ್ಯಾನಟ್ಟಿ ಗ್ರಾಮದಲ್ಲಿ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಕರೋಶಿ ಗ್ರಾಮದಲ್ಲಿ ಚರಂಡಿ ಗ್ರಾಮದಲ್ಲಿ ಒಟ್ಟು 10 ಲಕ್ಷ ಹಾಗೂ ಕಮತ್ಯಾನಟ್ಟಿಯಲ್ಲಿ 10 ಲಕ್ಷ ರೂಗಳನ್ನು ನೀಡಲಾಗಿದೆ.ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಹೇಶ ಭಾತೆ ಮಾತನಾಡಿ ಕರೋಶಿ ಗ್ರಾಮದಲ್ಲಿ ಚರಂಡಿ ನಿರ್ಮಾಣದಿಂದ ಇಲ್ಲಿನ ಜನರಿಗೆ ಸಾಕಷ್ಟು ಸಹಕಾರಿಯಾಗಲಿದೆ.ಶಾಸಕರಾದ ದುರ್ಯೋಧನ ಐಹೊಳೆ ಅವರು ನಮ್ಮ ಕರೋಶಿ,ನಾಗರಮುನ್ನೋಳ್ಳಿ ಜಿಲ್ಲಾ ಪಂಚಾಯತಗೆ ಈ ಹಿಂದೆ ಸಾಕಷ್ಟು ಅನುದಾನ ನೀಡಿದ್ದಾರೆ.ಇಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ ಎಂದರು.

ಗ್ರಾಮ ಪಂಚಾಯತ ಅಧ್ಯಕ್ಷ ಪಂಚಾಕ್ಷರಿ ಹಳಿಜೋಳೆ,ವಿಜಯ ಕೋಠಿವಾಲೆ,ಬಾಳು ಮುಗಳಿ,ಮಹಾಂತೇಶ ಭಾತೆ,ಬಸವಪ್ರಭು ಭಾತೆ,ಅಣ್ಣಾಸಾಹೇಬ ಶೆಂಡೂರೆ,ಸಾವಿತ್ರಿ ಜೈದೆ,ರಾಜು ಯಲ್ಲಾಯಿಗೋಳ,ದುಂಡಯ್ಯಾ ಪೂಜಾರಿ,ಮಹೇಶ ಚೌಡನ್ನವರ,ರಾಜು ಕೋಟಗಿ,ತೌಫಿಕ್ ಪಟೇಲ್,ಜಿಲ್ಲಾ ಪಂಚಾಯತ ಎಇಇ ಎಸ್.ಆರ್.ಭಜಂತ್ರಿ,ಬಸವರಾಜ ಬಡಿಗೇರ,ರುದ್ರಗೌಡ ಪಾಟೀಲ,ಸಿದ್ದಗೌಡ ಪಾಟೀಲ,ಲಕ್ಷ್ಮಣ ಕುಂಬಾರ,ಚಿದಾನಂದ ಅಂಬಲೆ,ಸಂತೋಷ ಅಂಬಲೆ ಮುಂತಾದವರು ಉಪಸ್ಥಿತರಿದ್ದರು.
