Education

ಕೆಎ ಎಸ್ ಪ್ರೊಬೇಷನರಿ ಅಧಿಕಾರಿಗಳಿಗೆ ಆಡಳಿತ ತರಬೇತಿ ನೀಡಿದ ಜಿನರಾಳ್ಕರ

Share

ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಕಳೆದ ವಿಧಾನಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಾಬಾಸಾಹೇಬ ಜಿನರಾಳ್ಕರ ಕೆಎ ಎಸ್ ಅಧಿಕಾರಿಗಳಿಗೆ ತರಬೇತಿ ನೀಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಡಚಿ ಮತಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ನಿವೃತ್ತ ನ್ಯಾಯಾಧೀಶ ಬಾಬಾಸಾಹೇಬ ಜಿನರಾಳ್ಕರ ಇವರಿಗೆ ಇತ್ತಿಚೆಗೆ ತುಮಕೂರು ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪದವಿ ನೀಡಿ ಗೌರವಿಸಿದೆ.

ಅವರಿಗೆ ದಿ. ಕಾನ್ಸ್ಟಿಟ್ಯೂಶನ ಆಫ್ ಇಂಡಿಯಾ ಎಕ್ಸ್ ಮೈನಿಂಗ್ ದಿ ರೇಗ್ಯುಲೇಟರಿ ಇನ್ಫ್ಲುಯೆನ್ಸ್ ಆಫ್ ಡಾ. ಬಿ.ಆರ.ಅಂಬೇಡ್ಕರ್ಸ ಆಲ್ ಇನ್ಕ್ಲೂಷಿವ ಪ್ಯಾರಾಡಿಗ್ಮ ಆನ್ ದಿ. ಕೋರ್ಟ್ಸಸ ಆಫ್ ಲಾ ಎಂಬ ವಿಷಯ ಕುರಿತು ಸಂಶೋಧನೆ ನಡೆಸಿ ಮಹಾ ಪ್ರೌಢ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಯವು ಪಿಎಚಡಿ ಪದವಿ ನೀಡಿ ಗೌರವಿಸಿದೆ.

ನ್ಯಾಯಾಂಗ ವಿಭಾಗದಲ್ಲಿ ಪರಿಣತಿ ಹೊಂದಿದ ಇವರು ಆಡಳಿತಾತ್ಮಕ ತರಬೇತಿ ಸಂಸ್ಥೆ ಮೈಸೂರಿನಲ್ಲಿ ಕೆಎಎಸ್ ಪ್ರೊಬೇಷನರಿ ಅಧಿಕಾರಿಗಳಿಗೆ ಜುಡಿಷಿಯಲ್ ಸಿಸ್ಟಮ್ ಹಾಗೂ ಪ್ರೊಸೆಸ ಕುರಿತು ಮಾರ್ಗದರ್ಶನ ನೀಡಿದರು.

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಜರುಗಿದ ಎರಡು ದಿನಗಳ ಸೋಶಿಯಲ್ ಜಸ್ಟಿಸ್ ಲೀಡರ್ಶಿಪ್ ತರಬೇತಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.

Tags:

error: Content is protected !!