Belagavi

ಓಪನ್ ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪನಲ್ಲಿ ಬೆಳಗಾವಿ ತಂಡಕ್ಕೆ 9 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕ

Share

2024 ರ ಜೂನ್ 22 ರಿಂದ 25 ರವರೆಗೆ ತುಮಕೂರು ಮತ್ತು ಬೆಂಗಳೂರಿನಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ನ ವತಿಯಿಂದ ಆಯೋಜಿಸಿದ್ದ ಓಪನ್ ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪನಲ್ಲಿ ಬೆಳಗಾವಿ ತಂಡವು 9 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಗೆದಿದ್ದೆ.
ಅಥರ್ವ ಹಡಪದಬೆಳ್ಳಿ, ಹಿರೇನ್ ರಾಜ್ 2 ಚಿನ್ನ, ದೃಷ್ಟಿ ಆಂಕಲೆ 1 ಬೆಳ್ಳಿ, 1 ಕಂಚು ಅವನೀಶ್ ಕೋರಿಶೆಟ್ಟಿ 1 ಚಿನ್ನ, 1 ಬೆಳ್ಳಿ, ರಶ್ಮಿತಾ ಅಂಬಿಗ 2 ಚಿನ್ನ, ಜಯಧ್ಯಾನ ಎಸ್ ರಾಜ್ 2 ಚಿನ್ನ.

ದೇವೆನ್ ಬಮಾನೆ 1 ಚಿನ್ನ, 1 ಬೆಳ್ಳಿ, ಸಾಯಿರಾಜ್ ಮೆಂಡಕೆ 1 ಚಿನ್ನ, 1 ಬೆಳ್ಳಿ, ಖುಷಿ ಅಗಶಿಮನಿ 1 ಬೆಳ್ಳಿ, 1 ಕಂಚಿನ ಪದಕವನ್ನು ಪಡೆದಿದ್ದಾರೆ. ಇವರಿಗೆ ತರಬೇತುದಾರರಾದ ಸೂರ್ಯಕಾಂತ್ ಹಿಂಡಲಗೇಕರ್, ಯೋಗೀಶ್ ಕುಲಕರ್ಣಿ, ವಿಶಾಲ ವೆಸನೆ, ಮಂಜುನಾಥ ಮಂಡೋಲ್ಕರ್, ವಿಠ್ಠಲ್ ಗಗನೆ, ಅನುಷ್ಕಾ ಶಂಕರಗೌಡ ಮತ್ತು ವಿಶ್ವಕರ ಗೌಡರ ಮಾರ್ಗದರ್ಶನ ದೊರೆತಿದೆ. ಕ್ರೀಡಾಳುಗಳನ್ನು ಡಾ.ಪ್ರಭಾಕರ ಕೋರೆ, ಮಾಜಿ ಶಾಸಕರಾದ ಶ್ಯಾಮ ಘಾಟಗೆ, ರಾಜ್ ಘಾಟಗೆ, ಉಮೇಶ್ ಕಲಘಟಗಿ, ಪ್ರಸಾದ್ ತೆಂಡೋಲ್ಕರ್, ಇಂದೂಧರ ಸೀತಾರಾಮ್ ಅವರು ಪ್ರೋತ್ಸಾಹಿಸಿದ್ದಾರೆ.

Tags:

error: Content is protected !!