ಸೋಮವಾರ ನಗರದ ಕಾಂಗ್ರೆಸ್ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಗ್ಯಾರಂಟಿ ಕಾಡ್೯ ನೋಡಿ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರು ಸರಕಾರದ ಪರವಾಗಿಯೂ ಘೋಷಣೆ ಮಾಡಿದ್ದಾರೆ. ಮಹಿಳೆರಿಗೆ ಹಿಂದುಳಿದ ವರ್ಗದವರಿಗೆ ತರಾತುರಿಯಲ್ಲಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ ಎಂದರು.
ಬಿಜೆಪಿಯವರು ಈ ಹಿಂದೆ ಮಹಿಳೆಯರಿಗೆ, ಯುವಕರಿಗೆ ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಕೊಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಒಂದು ಭರವಸೆ ಇಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಟಿಪ್ಪು ಸುಲ್ತಾನ ತೀರಿಕೊಂಡು ಎರಡೂ ಶತಮಾನ ಕಳೆದಿವೆ. ಆದರೆ ಬಿಜೆಪಿಯವರು ಇತಿಹಾಸ ತಿರುಚಲು ಹೊರಟ್ಟಿದ್ದಾರೆ. ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಜಾತಿ ಸಂಘರ್ಷ ಮಾಡಲು ಹೋರಟಿರುವುದನ್ನು ನಾನು ಖಂಡಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಪಕ್ಷದ ನಾಯಕರು ಇತಿಹಾಸವನ್ನು ಬದಲಾವಣೆ ಮಾಡಿ ಜನರ ಭಾವನೆಗೆ ಧಕ್ಕೆ ತರಲು ಹೊರಟಿರುವುದು ವಿಪರ್ಯಾಸವೇ ಸರಿ. ನಿರ್ಮಲಾನಂದ ಸ್ವಾಮೀಜಿ ಅವರು ಇಂಥನ್ನು ಖಂಡಿಸಬೇಕು. ಎಲ್ಲ ಸಮಾಜದ ಮುಖಂಡರನ್ನು ಕರೆಸಿ ಇದನ್ನು ಖಂಡಿಸಬೇಕು. ಅದೇ ರೀತಿ ಎಲ್ಲ ಧರ್ಮದ ಸ್ವಾಮೀಜಿಗಳು ಖಂಡಿಸಬೇಕು ಎಂದು ಮನವಿ ಮಾಡಿಕೊಂಡರು.
ಸಿನಿಮಾ ಮಾಡಲು ಹೊರಟಿರುವ ನಿರ್ದೇಶಕನನ್ನು ಕರೆಯಬೇಡಿ ನಿರ್ಮಲಾನಂದ ಸ್ವಾಮೀಜಿ ಅವರು, ಸಭೆಗೆ ಅವರನ್ನು ಕರೆದರೆ ಅದು ಸಮಾಜಕ್ಕೆ ಅವಮಾನ ಮಾಡಿದ ಹಾಗೆ. ಇಡೀ ಒಕ್ಕಲಿಗ ಸಮಾಜ ಅನ್ಯಾಯದ