ಕೊವಿಡ್‍ನಿಂದಾಗಿ ರಾಜ್ಯದ ರೈತರು ಸಾಕಷ್ಟು ಸಂಕಷ್ಟವನ್ನನು ಅನುಭವಿಸುತ್ತಿದ್ದಾರೆ. ಇನ್ನು ಸರಕಾರ ರೈತರು ಪಡೆದ ಸಾಲ ತುಂಬುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಹೇಳುತ್ತಿದೆ. ಆದರೆ ಬ್ಯಾಂಕುಗಳು ರೈತರಿಗೆ ನೋಟೀಸನ್ನ ನೀಡಿ ಅವರ ಟ್ರ್ಯಾಕ್ಟರ್‍ಗಳನ್ನು ಲಿಲಾವ್ ಮಾಡುತ್ತಿದೆ. ನಮಗೆ ನ್ಯಾಯ ಕೊಡಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕೊವಿಡ್ ನಿಂದಾಗಿ ರೈತರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ರೈತರು ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಹಣಕಾಸು ಸಂಸ್ಥೆಗಳು ಮಾತ್ರ ರೈತರಿಗೆ ಪಡೆದ ಸಾಲವನ್ನು ಮರುಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತು ರೈತರಿಗೆ ನೋಟೀಸ್ ನೀಡುತ್ತಿದ್ದಾರೆ. ಇನ್ನು ಚೆಲುವಿನಟ್ಟಿ ಗ್ರಾಮದ ರೈತ ವೋಮಾನಿ ಹುಂದರೆ ಎಂಬವರು ಟ್ರ್ಯಾಕ್ಟರ್ ಖರೀದಿಸಲು ಸಾಲ ಪಡೆದಿದ್ದರು. ಟ್ರ್ಯಾಕ್ಟರ್ ಮೇಲೆ ಸಾಲ ಪಡೆದು ಕಂತು ಕಟ್ಟದ್ದಕ್ಕೆ ರೈತರ ಟ್ರ್ಯಾಕ್ಟರ್‍ಗಳನ್ನು ಹಣಕಾಸು ಸಂಸ್ಥೆಯವರು ತೆಗೆದುಕೊಂಡು ಹೋಗಿದ್ದಾರೆ. ನಾವು ಕಂತು ಕಟ್ಟುತ್ತೇವೆ.

ನಮ್ಮ ಟ್ರ್ಯಾಕ್ಟರ್ ಕೊಡಿ ಎಂದರೆ ಅದು ಲಿಲಾವ್ ಆಯಿತು ಎಂದು ಹೇಳುತ್ತಿದ್ದಾರೆ. ಇನ್ನು ಲಿಲಾವ್ ಆದ ಕುರಿತು ಮಾಹಿತಿ ನೀಡಿ ಎಂದರೆ ರೈತರಿಗೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ನಮಗೆ ಈ ಕುರಿತಂತೆ ನ್ಯಾಯ ಒದಗಿಸಿ ನಮ್ಮ ಟ್ರ್ಯಾಕ್ಟರ್‍ಗಳನ್ನು ಮರಳಿ ಕೊಡಿಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಕಳೆದ ಎರಡು ವರ್ಷಗಳಿಂದ ಕೊವಿಡ್ ನಿಂದಾಗಿ ರೈತರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ರೈತರು ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಸರಕಾರ ಪತ್ರಿಕೆಗಳ ಮೂಲಕ ಸಧ್ಯಕ್ಕೆ ಸಾಲ ಮರುಪಾವತಿ ಮಾಡುವ ಅವಶ್ಯವಿಲ್ಲ ಎಂದು ದಿನಪತ್ರಿಕೆಗಳ ಮೂಲಕ ಹೇಳುತ್ತಿದೆ. ಆದರೆ ಹಣಕಾಸು ಸಂಸ್ಥೆಗಳು ಮಾತ್ರ ರೈತರಿಗೆ ಪಡೆದ ಸಾಲವನ್ನು ಮರುಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಈ ಕುರಿತು ರೈತರಿಗೆ ನೋಟೀಸ್ ನೀಡುತ್ತಿದ್ದಾರೆ. ಇನ್ನು ಚೆಲುವಿನಟ್ಟಿ ಗ್ರಾಮದ ರೈತ ವೋಮಾನಿ ಹುಂದರೆ ಎಂಬವರು ಟ್ರ್ಯಾಕ್ಟರ್ ಖರೀದಿಸಲು ಎಲ್ ಅಂಡ್ ಟಿ ಕಂಪನಿಯಿಂದ ಸಾಲ ಪಡೆದಿದ್ದರು. ಟ್ರ್ಯಾಕ್ಟರ್ ಮೇಲೆ ಸಾಲ ಪಡೆದು ಕಂತು ಕಟ್ಟದ್ದಕ್ಕೆ ರೈತರ ಟ್ರ್ಯಾಕ್ಟರ್‍ಗಳನ್ನು ಹಣಕಾಸು ಸಂಸ್ಥೆಯವರು ತೆಗೆದುಕೊಂಡು ಹೋಗಿದ್ದಾರೆ. ನಾವು ಕಂತು ಕಟ್ಟುತ್ತೇವೆ. ನಮ್ಮ ಟ್ರ್ಯಾಕ್ಟರ್ ಕೊಡಿ ಎಂದರೆ ಅದು ಲಿಲಾವ್ ಆಯಿತು ಎಂದು ಹೇಳುತ್ತಿದ್ದಾರೆ. ಇನ್ನು ಲಿಲಾವ್ ಆದ ಕುರಿತು ಮಾಹಿತಿ ನೀಡಿ ಎಂದರೆ ರೈತರಿಗೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಹಗಾಗಿ ನಾವಿ ನ್ಯಾ ಕೊಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಇನ್ನು ಕೊವಿಡ್‍ನಿಂದಾಗಿ ರೈತರು ಸಾಕಷ್ಟು ತೊಂದರೆಗೆ ಈಡಾಗಿದ್ದಾರೆ. ಇಂಥ ಸಂದರ್ಭದಲ್ಲಿ ಎಲ್ ಆಂಡ್ ಟಿ ಕಂಪನಿ ರೈತರ ಟ್ರ್ಯಾಕ್ಟರ್‍ನ್ನು ತೆಗೆದುಕೊಂಡು ಹೋಗಿದ್ದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ತಮಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳು ಈ ಕುರಿತಂತೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.