ಖಾನಾಪೂರ ತಾಲೂಕಿನ ರಾಮನಗರ-ಅಳ್ನಾವರ ರಸ್ತೆಯ ಲಿಂಗನಮಠ ಕ್ರಾಸ್ ಹತ್ತಿರ ಅಕ್ರಮವಾಗಿ ಗೋವಾ ಮಧ್ಯ ಸಾಗಿಸುತ್ತಿದ್ದ ಹೈಟೆಕ್ ಸ್ಲೀಪರ್ ಕೋಚ್ ಬಸ್ ಮೇಲೆ ಅಬಕಾರಿ ಸಿಬ್ಬಂದಿ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಮಾನ್ಯ ಅಬಕಾರಿ ಅಪರ ಆಯುಕ್ತರಾದ ಡಾ ವೈ. ಮಂಜುನಾಥ ಬೆಳಗಾವಿ ಹಾಗೂ ಮಾನ್ಯ ಅಬಕಾರಿ ಜಂಟಿ ಆಯುಕ್ತರು, ಶ್ರೀ, ಜಯರಾಮೇಗೌಡ, ಮಾನ್ಯ ಅಬಕಾರಿ ಉಪ ಆಯುಕ್ತರು, ಆದೇಶ ಹಾಗೂ ಮಾರ್ಗದರ್ಶನದಲ್ಲಿ ಶ್ರೀ, ಸಿ. ಎಸ್. ಪಾಟೀಲ, ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ, ಬೆಳಗಾವಿರವರ ನೇತೃತ್ವದಲ್ಲಿ ಇಂದು ಶನಿವಾರ ಬೆಳಿಗ್ಗೆ 3ಗಂಟೆ 45ನಿಮಿಷದ ಸುಮಾರಿಗೆ ಖಾನಾಪೂರ ತಾಲೂಕಿನ ರಾಮನಗರ-ಅಳ್ನಾವರ ರಸ್ತೆಯ ಲಿಂಗನಮಠ ಕ್ರಾಸ್ ಹತ್ತಿರ ಶ್ರೀ ದಾವಲ್ ಸಾಬ್ ಸಿಂದೋಗಿ ಅಬಕಾರಿ ನಿರೀಕ್ಷಕರು, ಹಾಗೂ ಶ್ರೀ ಜಯರಾಮ್ ಹೆಗಡ, ಎನ್. ಆರ್. ಪಾಟೀಲ್, ಚಾಲುಕ್ಯ ಶಹಪೂರ ಹಾಗೂ ಅಬಕಾರಿ ಪೇದೆಗಳು ದಾಳಿ ನಡೆಸಿ ಅಶೋಕ್ ಲೈಲೆಂಡ್ ಹೈ ಟೆಕ್ ಸ್ಲೀಪರ್ ಕೋಚ್ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 518.52 ಲೀ. ಗೋವಾ ಮದ್ಯ ಹಾಗೂ ಒಂದು ಬಿಳಿ ಬಣ್ಣದ ಅಶೋಕ ಲೈಲೆಂಡ್ ಆರು ಚಕ್ರದ ಹೈಟೆಕ್ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸದರಿ ಪ್ರಕರಣದಲ್ಲಿ ಜಪ್ತಿ ಪಡಿಸಿದ ಮದ್ಯದ ಒಟ್ಟು ಮೌಲ್ಯ 21ಲಕ್ಷ 68ಸಾವಿರದ 869 ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
