ನಮ್ಮ ಸರ್ಕಾರ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಹಿಜಾಬ್ ಮತ್ತು ಕೇಸರಿ ಎರಡೂ ಕೂಡ ಕಾಲೇಜು ಕ್ಯಾಂಪಸ್ ಒಳಗೆ ಬರಬಾರದು ಎಂಬುದು ನಮ್ಮ ಸರ್ಕಾರದ ನಿಲವು ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಆರ್.ಅಶೋಕ್ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಈಗ ನಡೆಯುತ್ತಿರುವ ಘಟನೆಗಳು ವಿದ್ಯಾರ್ಥಿಗಳ ದೃಷ್ಟಿಯಿಂದ ಒಳ್ಳೆಯದಲ್ಲ. ಹಿಜಾಬ್ ಬಗ್ಗೆ ಕೋರ್ಟ ಆದೇಶ ಏನು ಬರುತ್ತದೆ ಅದನ್ನು ಸರ್ಕಾರ ಪಾಲನೆ ಮಾಡುತ್ತದೆ. ಕೇಸರಿ ಶಾಲು, ಹಿಜಾಬ್ ಹಾಕೋದು ಎರಡೂ ಕೂಡ ತಪ್ಪು. ಸರ್ಕಾರ ತನ್ನ ನೀತಿ ನಿಯಮಗಳನ್ನು ಈಗಾಗಲೇ ಹೊರಡಿಸಿದೆ. ಡ್ರೇಸ್ ಕೋಡ್ ಏನು ಎಂಬುದನ್ನು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರದ ಆದೇಶವನ್ನು ಧಿಕ್ಕರಿಸಿ ಈ ರೀತಿ ಮಾಡೋದು. ಅದಕ್ಕೆ ಕಾಂಗ್ರೆಸ್ ಪ್ರಚೋದನೆ ಮಾಡುವುದು ಒಳ್ಳೆಯದಲ್ಲ ಎಂದರು.
ಮಹಾರಾಷ್ಟ್ರ, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಕೋರ್ಟಗಳ ನಿರ್ದೇಶನಗಳನ್ನು ನಮ್ಮ ಎಜಿ ಅವರು ವಾದ ಮಾಡುತ್ತಾರೆ. ಅಂತಿಮವಾಗಿ ಬರುವ ಕೋರ್ಟ ಆದೇಶವನ್ನು ಸರ್ಕಾರ ಪಾಲನೆ ಮಾಡಿಯೇ ಮಾಡುತ್ತದೆ. ಹೀಗಾಗಿ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಯಾರೂ ಗಲಾಟೆ ಮಾಡಬಾರದು, ಇದು ಒಳ್ಳೆಯ ಸಂಸ್ಕøತಿ ಅಲ್ಲ. ಈ ತರಹ ಘಟನೆಗಳು ಆದಾಗ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಈಗಾಗಲೇ ನಮ್ಮ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಅದೇ ರೀತಿ ನಮ್ಮ ಮುಖ್ಯಮಂತ್ರಿಗಳು ಮೂರು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಇದರಲ್ಲಿ ಸರ್ಕಾರದ ವಿಫಲತೆಯ ಪ್ರಶ್ನೆಯೇ ಬರುವುದಿಲ್ಲ ಎಂದರು.
ಇನ್ನು ಹಿಜಾಬ್ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಅನ್ನೋದಾದ್ರೆ ಮತ್ತೆ ಕೇಸರಿ ಹಿಂದೆ ಯಾರಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು ಹಾಕಿದ್ದಾರೆ ಎಂದು ಇವರು ಹಾಕಿದ್ದಾರೆ. ಈಗ ನಾವು ಹೇಳಿದ್ದೇವು ಎರಡೂ ತೆಗೆಯಿರಿ ಎಂದು ಹೀಗಾಗಿ ಈ ಪ್ರಶ್ನೆಯೇ ಬರೋದಿಲ್ಲ ಎಂದು ಸಮರ್ಥಿಸಿಕೊಂಡರು. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಯಿಸಿದ ಆರ್.ಅಶೋಕ್ ಕಾಂಗ್ರೆಸ್‍ಗೆ ಏನು ಬೇಕೋ ಆ ಹೇಳಿಕೆ ಡಿಕೆಶಿ ಕೊಟ್ಟಿದ್ದಾರೆ. ಯಾವ ಧ್ವಜವನ್ನು ಇಳಿಸಿಲ್ಲ ಎಂದು ಅಲ್ಲಿನ ಎಸ್‍ಪಿ, ಡಿಸಿ ಹೇಳಿಕೆ ಕೊಟ್ಟಿದ್ದಾರೆ. ಅದು ಅಧಿಕೃತ ಆಗುತ್ತದೆ ಹೊರತು ಡಿಕೆಶಿ ಹೇಳಿಕೆ ಅಧಿಕೃತ ಆಗೋದಿಲ್ಲ. ಇನ್ನು ಖಾಲಿ ಕಂಬದಲ್ಲಿ ಕೇಸರಿ ಧ್ವಜ ಹಾರಿಸೋದು ತಪ್ಪು ಎಂದರು.