hubbali

ಹಾಡಹಗಲೇ ಪಿಸ್ತೂಲ್ ಹೊರತೆಗೆದ ಬಿಜೆಪಿ ಮುಖಂಡ: ದೂರು ದಾಖಲು

Share

ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳದಲ್ಲಿ ಬಿಜೆಪಿ ಮುಖಂಡ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆ ಧಾರವಾಡ ತಾಲೂಕಿನ ಹೊಸ ತೇಗೂರು ಗ್ರಾಮದಲ್ಲಿ ನಡೆದಿದೆ.

ನಾಗಪ್ಪ ಗಾಣಿಗೇರ ಎಂಬಾತ ಮಡಿವಾಳೆಪ್ಪ ಬೆಳವಲದ ಎಂಬಾತನಿಗೆ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದಾರೆ. ಈ ಕುರಿತು ಗರಗ ಠಾಣೆಗೆ‌ ಮಡಿವಾಳೆಪ್ಪ ದೂರು ನೀಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್​​ನಿಂದ ಹೊಡೆಯಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಗ್ ರೈಸ್ ಅಂಗಡಿ ಇಡುವ ಸಂಬಂಧ ನಾಗಪ್ಪ ಮತ್ತು ಮಲಿಕ್ ಎಂಬುವರ ನಡುವೆ ಈ ಜಗಳ ನಡೆದಿತ್ತು. ಈ ಜಗಳ ಬಿಡಿಸಲು ಮಡಿವಾಳಪ್ಪ ಮಧ್ಯೆ ಪ್ರವೇಶಿಸಿದ್ದರು. ಇದರಿಂದ ಕುಪಿತನಾದ ನಾಗಪ್ಪ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಗರಗ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

Tags:

error: Content is protected !!