ಅಥಣಿ ಪುರಸಭಾ ಚುನಾವಣೆಯಲ್ಲಿ ವಾರ್ಡ್ ನಂ. 3 ರಿಂದ ಆಯ್ಕೆಯಾದ ನೂತನ ಪುರಸಭಾ ಸದಸ್ಯ ಸಂತೋಷ ಸಾವಡಕರ ಚುನಾವಣೆಗಳು ಮುಗಿದು ಕೆಲವೇ ದಿನಗಳಲ್ಲಿ ತಾವು ನೀಡಿದ ಭರವಸೆಯಂತೆ ಸು. 5 ಸಾವಿರ ಲೀಟರ್ ಸಾಮರ್ಥ್ಯದ ಜಲ ಕುಂಭವನ್ನು ಸ್ಥಾಪಿಸಿದ್ದಾರೆ. ಇಂದು ಮಾಜಿ ಡಿಸಿಎಂ ಹಾಗೂ ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ ಅವರ 62ನೇ ಜನ್ಮದಿನದ ನಿಮಿತ್ಯ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಯುವ ಧುರೀಣ ಚಿದಾನಂದ ಸವದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಶಂಕರ ನಗರದಲ್ಲಿ ನೂತನ ಜಲ ಕುಂಬದ ಲೋಕಾರ್ಪಣೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಚಿದಾನಂದ ಸವದಿ ಅವರು ಮಾತನಾಡಿ ನನ್ನ ತಂದೆ ಯವರ 62 ನೇ ಹುಟ್ಟು ಹಬ್ಬದ ಪ್ರಯುಕ್ತ ವಾರ್ಡ ನಂಬರ್ ೦3 ರಲ್ಲಿ ಇಲ್ಲಿ ಜನರಗೆ ಚುನಾವಣಾ ವೇಳೆ ಕೊಟ್ಟತ್ತಾ ಭರವಸೆ ಯನ್ನು ಸಂತೋಷ ಸಾವಡಕರ ಅವರ ನಿಸ್ವಾರ್ಥ ಸೇವೆ ಮೆಚ್ಚುವಂತದ್ದು, ಚುನಾವಣೆ ಸಂದರ್ಭದಲ್ಲಿ ಈ ಕುಟುಂಬಗಳ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಶೀಘ್ರಗತಿಯಲ್ಲಿ ಅವರಿಗೆ ಕುಡಿಯುವ ನೀರು ಒದಗಿಸುವುದು ಉತ್ತಮ ಕಾರ್ಯವಾಗಿದೆ. ಅದರಂತೆ ರಸ್ತೆ ಸುಧಾರಣೆ ಕೂಡ ಮಾಡಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ
ಪುರಸಭಾ ಸದಸ್ಯ ಸಂತೋಷ ಸಾವಡಕರ ಮಾತನಾಡಿ ನಮ್ಮ ನೆಚ್ಚಿನ ನಾಯಕರಾದ ಲಕ್ಷ್ಮಣ ಸವದಿ ಅವರ ಹುಟ್ಟು ಹಬ್ಬದ ದಿವಸ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಬೇಕೆಂಬ ಸಂಕಲ್ಪ ಹೊಂದಿದ್ದು, ಅದರಂತೆ ಇಂದು ಲೋಕಾರ್ಪಣೆ ಮಾಡಿದ್ದೇವೆ. ಸಾರ್ವಜನಿಕರು ಈ ಸದುಪಯೋಗ ಪಡಿಸಿಕೊಳ್ಳಬೇಕು ಬುಡಕಟ್ಟು ಜನಾಂಗದ 70 ಕುಟುಂಬಸ್ಥರು ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.ಭರವಸೆ ನೀಡಿದಂತೆ ತುರ್ತು ಅವಶ್ಯವಿರುವ ಕುಡಿಯುವ ನೀರಿಗಾಗಿ ಈ ಜಲಕುಂಭ ಸ್ಥಾಪನೆ ಮಾಡುತ್ತಿದ್ದೇನೆ. ಸಂಚಾರಕ್ಕೆ ತೊಂದರೆಯಾಗಿದ್ದು ಇಲ್ಲಿನ ರಸ್ತೆಯನ್ನು ಕೂಡ ಸಂಚಾರಕ್ಕೆ ಅನುಕೂಲವಾಗುವಂತೆ ಸುಧಾರಣೆ ಮಾಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಪುರಸಭೆ ಸದಸ್ಯ ಕಲ್ಮೇಶ್ ಮಡ್ಡಿ, ಡಾ.ವಿಶ್ವನಾಥ ಚಿಮ್ಮಡ, ಡಾ.ಸಾಧಿಕ ಗಲಗಲಿ, ವಿನೋದ್ ಸಾವಡಕರ, ವಿಶಾಲ ಸಗರಿ, ಮಹಾಂತೇಶ್ ಠಕ್ಕಣ್ಣವರ, ಸುಶಾಂತ ಪತ್ತಾರ, ಮಹಾದೇವ ಸಗರಿ, ಶಿವಾನಂದ ಪಾಟೀಲ, ಅಭಯ ಸಗರೆ, ಸುಶಾಂತ ಸಾಳುಂಕೆ, ಸಚೀನ ಮಿರ್ಜಿ, ಸೌರಭ ಪಾಟೀಲ, ಅನೀಲ ಮಹಾಜನ, ವೀರಣ್ಣ ಹಳ್ಳಿ, ನಾಗಪ್ಪ ಬಾಗಡಿ, ನಾಗೇಶ ಬಾಗಡಿ, ರಾಹುಲ ಬಳ್ಳೋಳ್ಳಿ, ಈಶ್ವರ ಕೋಳಿ, ಸಿದ್ದಪ್ಪ ಸತ್ತಿ,ಗಣೇಶ ಪಾಟೀಲ, ಆನಂದ ಮಾಳಿ ಇನ್ನಿತರರು ಉಪಸ್ಥಿತರಿದ್ದರು.