ಹರಕುಬಾಯಿ ನಾಯಕ ಈಶ್ವರಪ್ಪ ಸುದ್ದಿಯನ್ನು ಬಿಟ್ಟುಬಿಡಿ. ಇಂಥವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ಸರಕಾರ ಧೋರಣೆಗಳು ಖಂಡನೀಯ ಎಂದು ಕೆಪಿಸಿಸಿ ಕಾರ್ಯಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್ ಈಶ್ವರಪ್ಪ ಸುದ್ದಿಯನ್ನು ಬಿಟ್ಟುಬಿಡಿ. ಈಶ್ವರಪ್ಪ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರಲ್ಲ ಸರಕಾರದ ಈ ಮನೋಧೋರಣೆ ಖಂಡನೀಯ. ಶಾಲಾಕಾಲೇಜುಗಳ ಮೇಲೆ ವಿದ್ಯಾರ್ಥಿಗಳ ಮೇಲೆ ಈ ಸರಕಾರದವರು ಕೇಸ್ ಹಾಕಿದ್ದಾರೆ. ಇದು ಸರಕಾರಕ್ಕೆ ಕೊನೆಯ ಕಾಲ. ಯಾರಾದರೂ ರೈತರು ಹಾಗೂ ವಿದ್ಯಾರ್ಥಿಗಳ ಮೇಲೆ ಅದು ಹೇಗೆ ಕೇಸ್ ದಾಖಲಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.
ನ್ಯಾಯಾಲಯದ ಆದೇಶ ಎಷ್ಟಿದೆಯೋ ಅಷ್ಟು ಮಾತ್ರ ಪಾಲಿಸಬೇಕು ಇದನ್ನೆಲ್ಲ ಬಿಟ್ಟು ಹೆಚ್ಚಿನ ಆದೇಶ ಯಾಕೆ ಹೊರಡಿಸಬೇಕು. ಈ ವಿಚಾರವನ್ನು ಪಾಲಕರು, ವಿದ್ಯರ್ಥಿಗಳು ಹಾಗೂ ಶಿಕ್ಷರಿಗೆ ಬಿಟ್ಟುಬಿಡಬೇಕು. ಅವರೇ ಈ ವಿಚಾರವನ್ನು ನೋಡಿಕೊಳ್ಳುತ್ತಾರೆ. ಅದನ್ನು ಬಿಟ್ಟು ಸರಕಾರ ಎಸ್‍ಡಿಪಿಐನೊಂದಿಗೆ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಿ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇನ್ನು ಈಶ್ವರಪ್ಪ ಹೇಳಿಕೆ ಈಗ ಬಿಜೆಪಿ ಸರಕಾರಕ್ಕೆ ತೊಂದರೆಯನ್ನುಂಟುಮಾಡುತ್ತಿದೆ. ಇನ್ನು ಡಿ.ಕೆ.ಶಿವಕುಮಾರ್ ಈಗ ಈಶ್ವರಪ್ಪರನ್ನು ಬಿಟ್ಟು ಅವರನ್ನು ಸಮರ್ಥಿಸಿಕೊಳ್ಳುವ ಸರಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ. ಇನ್ನು ಮುಂದೆ ಈ ಕುರಿತಂತೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
