ಛತ್ರಪತಿ ಶಿವಾಜಿ ಮಹಾರಾಜರ 392 ನೇ ಜಯಂತಿ ಇಂದು ಆಚರಿಸಲಾಗುತ್ತಿದೆ. ನೆರೆ ರಾಜ್ಯ ಮಹಾರಾಷ್ಟ್ರ ರಾಜ್ಯದಲ್ಲಿ ಶಿವಾಜಿ ಮಹಾರಾಜರ ಜಯಂತಿಯನ್ನು ಬಹು ವಿಜೃಂಭಣೆಯಿಂದ ಸಂಭ್ರಮದಿಂದ ಆಚರಿಸಲಾಯಿತು. ಜಗನ್ಮಾತೆ ತುಳಜಾಭವಾನಿ ಮಹಾನಭಕ್ತರಾಗಿದ್ದ ಶಿವಾಜಿ ಮಹಾರಾಜರು ಪ್ರತಿ ಯುದ್ದ ಸಂದರ್ಭದಲ್ಲಿ ಆದಿಶಕ್ತಿಯ ದರ್ಶನ ಪಡೆಯುತ್ತಿದ್ದರು. ಹಿಂದೂ ಸಾಮ್ರಾಜ್ಯದ ರಕ್ಷಣೆಗೆ ಸ್ವತಃ ತುಳಜಾಭವಾನಿಯೇ ಶಿವಾಜಿ ಮಹಾರಾಜರಿಗೆ ತುಳಜಾಪುರ ಗರ್ಭ ಗುಡಿಯಲ್ಲಿ ಪ್ರತ್ಯಕ್ಷಳಾಗಿ ತಲವಾರ ಕೊಟ್ಟಿದ್ದಳು ಬ ಪ್ರತಿತಿ ಇದೆ. ಹೀಗಾಗಿ ಶಿವಾಜಿ ಜಯಂತಿಯಂದು ಶಿವಾಜಿ ಮಹಾರಾಜರ ಮೂರ್ತಿಯನ್ನು ತುಳಜಾಭವಾನಿ ಪ್ರತಿಮೆ ಮುಂದೆ ಪ್ರತಿಷ್ಠಾಪಿಸಿ ತಲವಾರ ಕೊಡೊ ಅಲಂಕಾರ ಸೃಷ್ಟಿ ಮಾಡಲಾಗಿರುತ್ತದೆ. ವಿಜಯದಶಮಿಯಲ್ಲಿ ಹಾಗೂ ಶಿವಾಜಿ ಜಯಂತಿಯಂದು ಈ ಅಲಂಕಾರ ನೋಡಲು ಸಿಗುತ್ತದೆ. ಇಂದು ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಈ ಫೊಟೊ ವೈರಲ್ ಆಗಿದೆ.
