ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮದ್ಯಂತರ ತೀರ್ಪಿನ ಬಳಿಕ ಇಂದಿನಿಂದ ಹೈಸ್ಕೂಲ್ ಆರಂಭಗೊಂಡಿವೆ. ವಿಜಯಪುರ ವಿಜಯಪುರ ಜಿಲ್ಲೆಯ 636 ಹೈಸ್ಕೂಲ್ ಗಳು ಆರಂಭಗೊಂಡಿವೆ. ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ವಿಚಾರವಾಗಿ ಜಿಲ್ಲೆಯಾ ದ್ಯಂತ ಎಲ್ಲ ಶಾಲೆಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ವಿದ್ಯಾರ್ಥಿಗಳನ್ನು ಹೊರತುಪಡಿಸಿ ಪೋಷಕರಿಗೆ ಹಾಗೂ ಅನ್ಯರಿಗೆ ಪ್ರವೇಶ ನಿಷೇಧಿಸಲಾಗಿದ ಎಂಸು ಜಿಲ್ಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಿದೆ.

ಶಾಲೆಗಳ ಆರಂಭದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು ಓರ್ವ ಎಸ್ಪಿ, ಓರ್ವ ಎಎಸ್ಪಿ, ಐವರು ಡಿಎಸ್ಪಿ 19 ಜನ ಇನ್ಸ್‌ಪೆಕ್ಟರ್ಸ್, 45 ಪಿಎಸ್ಐ ಗಳು, 70 ಎಎಸ್ಐ ಗಳು,670 ಪೊಲೀಸ್ ಕಾನ್ಸಸ್ಟೇಬಲ್ಸ್ ಹಾಗೂ ಒಂದು ಐ ಆರ್ ಬಿ ತುಕಡಿ, ಆರು ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ
