ವ್ಯಾಲೆಂಟೈನ್ಸ್ ಡೇಯಂದು ಪ್ರೇಮಿಗಳು ತಮ್ಮ ಪ್ರೇಮಿಗೆ ಅತ್ಯಮೂಲ್ಯ ವಸ್ತುವನ್ನ ಉಡುಗೊರೆಯಾಗಿ ನೀಡುತ್ತಾರೆ. ಆದರೇ ಇಲ್ಲೊಬ್ಬ ಪತ್ನಿ ಬಂಗಾರ-ಬೆಳ್ಳಿಗಿAತಲೂ ಅಮೂಲ್ಯವಾದ ತನ್ನ ಲೀವರ್‌ನ್ನೇ ತನ್ನ ಪತಿಗೆ ನೀಡಿ ಮಾದರಿಯಾಗಿದ್ದಾಳೆ.

ಗ್ವಾಲಿಯರ್‌ನ ೪೭ ವರ್ಷದ ಮಹಿಳೆ ವ್ಯಾಲೆಂಟೈನ್ಸ್ ಡೇ ನಂದು ತನ್ನ ಪತಿಗೆ ತನ್ನ ಲೀವರ್ ದಾನ ಮಾಡಿ ಆತನ ಜೀವನವನ್ನು ಬದುಕಿಸಿದ್ದಾಳೆ. ಆಸ್ಟರ್ ಆರ್‌ವಿ ಹಾಸ್ಪಿಟಲ್‌ನಲ್ಲಿ ಲೀವರ್ ಅಳವಡಿಕೆಯ ಯಶಸ್ವಿ ಶಸ್ತç ಚಿಕಿತ್ಸೆ ಮಾಡಲಾಗಿದೆ. ಮಹಿಳೆ ಮತ್ತು ಆಕೆಯ ಪತಿಯ ಹೆಸರನ್ನ ಆಸ್ಪತ್ರೆ ಆಡಳಿತ ಮಂಡಳಿ ಗುಪ್ತವಾಗಿ ಬಚ್ಚಿಟ್ಟಿದೆ. ಈ ಮಹಿಳೆಯ ಪತಿಗೆ ೪ ವರ್ಷದಿಂದ ಲೀವರ್ ಸಿರೋಸಿಸ್ ಹುಣ್ಣು ಕಾಣಿಸಿಕೊಂಡಿತ್ತು. ಹಲವೆಡೆ ಚಿಕಿತ್ಸೆಗೆ ಅಲೆದಾಡಿದ್ದರು. ಆದರೇ ಕಡೆಗೆ ವೈದ್ಯರು ಈ ರೋಗಕ್ಕೆ ಲೀವರ್ ಟ್ರಾನ್ಸ್ಪ್ಲಾಂಟ್‌ವೊAದೇ ಉಪಾಯ ಸೂಚಿಸಿದ್ದರು. ಈ ವೇಳೆ ಸ್ವತಃ ಪತ್ನಿಯೇ ತನ್ನ ಲೀವರ್ ನೀಡಲು ಮುಂದಾದರು. ವೈದ್ಯರು ತಪಾಸಣೆ ನಡೆಸಿದಾಗ ಮ್ಯಾಚ್ ಕೂಡ ಆಯಿತು. ಕೂಡಲೇ ಟ್ರಾನ್ಸ್ಪ್ಲಾಂಟ್ ಮಾಡಲಾಯಿತು. ಪ್ರೇಮಿಗಳ ದಿನಾಚರಣೆಯಂದು ತನ್ನ ಲೀವರ್ ನೀಡಿ ಪತಿಯ ಪ್ರಾಣ ಉಳಿಸಿದ ಪತ್ನಿ ಪ್ರೇಮದ ನಿಜ ಅರ್ಥವನ್ನ ತಿಳಿಸಿಕೊಟ್ಟಿದ್ದಾಳೆ.
