ಬೆಂಗಳೂರಿನಲ್ಲಿ ಇಂದು ರಾಜ್ಯ ವಿಧಾನ ಮಂಡಲದ ಜಂಟಿ ಅದಿವೇಶನ ಪ್ರಾರಂಭವಾಗಿದೆ. ರಾಜ್ಯಪಾಲರಾದ ಥಾವರ್‍ಚಂದ್ ಗೆಲ್ಹೋಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನಿಂದ ರಾಜ್ಯದ ವಿಧಾನ ಮಂಡಲದ ಜಂಟಿ ಅಧಿವೇಶನ ಪ್ರಾರಂಭವಾಗಿದೆ. ಈ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದರು. ನಾವು ಕಳೆದ ಕೆಲ ವರ್ಷಗಳಿಂದ ಕೊವಿಡ್ ನಂತಹ ಸಾಂಕ್ರಾಮಿಕ ರೋಗದಿಂದ ತತ್ತರಿಸಿದೆ. ಇನ್ನು ಇಂಥ ಸಂದರ್ಭದಲ್ಲಿ ನಾವು ಬುದ್ಧಿವಂತಿಕೆಯಿಂದ ರೋಗದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇವೆ. ಇನ್ನು ನಮ್ಮ ಸರಕಾರದ ವತಿಯಿಂದ ಕೊವಿಡ್ ನಿಂದ ಹೊರಬರಲು ಸಾಧ್ಯವಿರುವ ಎಲ್ಲಾ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಆತ್ಮ ನಿರ್ಭರ ಭಾರತದ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದೇವೆ. ಭಾರತ ಉತ್ಪಾದನೆ ಹಾಗೂ ರಫ್ತು ಕ್ಷೇತ್ರದಲ್ಲಿ ವ್ಯಾಪಕವಾಗಿ ಕಾರ್ಯ ಮಾಡುತ್ತಿದೆ.
ಇನ್ನು ಕೊವಿಡ್ ಸಂದರ್ಭದಲ್ಲಿ ಕೊವಿಡ್ ವಾರಿಯರ್ಸ್ ಆಗಿ ಮುಂದಿನ ಸಾಲಿನಲ್ಲಿ ನಿಂತು ಹೋರಾಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ. ಎಂದರು.
ಇನ್ನು ಕೊವಿಡ್ ಸಂದರ್ಭದಲ್ಲಿ ನಮ್ಮ ಸರಕಾರ ಜನರ ಆಓಗ್ಯ ರಕ್ಷಣೆಯ ದೃಷ್ಠಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸೋಂಕಿತರ ಟ್ರ್ಯಾಕಿಂಗ್ ಟ್ರೇಸಿಂಗ್, ಹಾಗೂ ಚಕಿತ್ಸೆ ಕುರಿತಂತೆ ಕಾರ್ಯ ಮಾಡಿದೆ. ಇನ್ನು ಎಲ್ಲರಿಗೂ ವ್ಯಾಕ್ಸಿನ್ ನೀಡು ದೃಷ್ಟಿಯಲ್ಲಿ ನಮ್ಮ ಸರಕಾರ ಮುಂಚೂಣಿಯಲಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಬೇರೆ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಐಟಿ ಸೆಕ್ಟರ್‍ನಲ್ಲಿ ಕೊವಿಡ್ ಪ್ರತಿಬಂಧ
ನೆಯನ್ನು ಮಾಡಲು ತಾಂತ್ರಿಕ ವಿಧಾನಗಳನ್ನು ಬಳಕೆ ಮಾಡಿದ್ದು ದೇಶಕ್ಕೇ ಮಾದರಿಯಾದುದು ಎಂದರು.
ಇನ್ನು ರಾಜ್ಯ ವಿಧಾನ ಮಂಡಲದ ಅಧಿವೇಶನ ಕುರಿತಂತೆ ರಾಜ್ಯಪಾಲರು ಮಾತನಾಡಿದ್ದಾರೆ. ಇನ್ನು ನಕಲಾಪಗಳು ಒಂದು ವಾರಗಳ ಕಾಲ ನಡೆಯುತ್ತಿದ್ದು ರಾಜ್ಯದ ವಿವಿಧ ವಿಚಾರಗಳ ಕುರಿತಂತೆ ಚರ್ಚೆ ನಡೆಯಲಿವೆ.