ಹೌದು ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ 65 ವಿವಿಧ ಜಾತಿಯ ಮರಗಳನ್ನು ಬೆಳೆಸಲು ರೈತರಿಗೆ ಅವಕಾಶ ನೀಡಲಾಗಿದ್ದು,ಕಟಾವಿಗೂ ಕೂಡಾ ಸರಳ ಕಾನೂನು ರಚಿಸಲಾಗಿದೆ ಎಂದು ಅರಣ್ಯ ಖಾತೆಯ ಸಚಿವ ಉಮೇಶ್ ಕತ್ತಿ ಹೇಳಿದರು.ಅವರು ಕಿತ್ತೂರು ಸಮೀಪದ ಗಿರಿಯಾಲ-ಚನ್ನಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ವೃಕ್ಷೋದ್ಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಮಾತ್ರ ಗಂಧದ ಮರಗಳು ಚೆನ್ನಾಗಿ ಬೆಳೆಯುತ್ತವೆ, ಅವು ಲಾಭದಾಯಕ ಕೂಡಾ ಆದ್ದರಿಂದ ರೈತರು ಹೊಲಗಳಲ್ಲಿ ಗಂಧದ ಮರಗಳನ್ನು ನೆಟ್ಟು ಕೋಟ್ಯಂತರ ರೂಪಾಯಿ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.

ತದನಂತರದಲ್ಲಿ ಡಿಸಿಎಫ್ ಹರ್ಷಭಾನು ಮಾತನಾಡಿ ಅಗ್ರತೋ ಭ್ರಮರೂಪಯ್ಯ,ಮಧ್ಯತೋ ವಿಷ್ಣು ರೂಪಿಣಿ,ಅಗ್ರತೋ ಶಿವರೂಪಯ್ಯಾ ಇಂತಿ ರೃಕ್ಷರಾಜ ಎತ್ತೆ ನಮಃ ಆತರಹ ನಮಸ್ಕಾರ ಮಾಡಿದ ಸಂಸ್ಕೃತಿ ನಮ್ಮದು ಅಂತ ಸಂಸ್ಕೃತಿ ಯಾವಾಗ ಅಳಿದು ಹೋಗುತೆ ಅಂತ ಕಂಡು ಬಂದಾಗ ಮತ್ತೆ ಎಲ್ಲರೂ ಸಂಘಟಿತರಾಗಿ ಆ ಸಂಸ್ಕೃತಿ ಅಡೆಗೆ ನಡೆಯುವಂತ ಕಾರ್ಯವಾಗಬೇಕು ಇದೇ ಒಂದು ಕಾರಣಿಭೂತರಾಗಿ ಇವತ್ತು ಏನು ಕರಿಯಮ್ಮ ದೇವಿಯ ಸಾನಿಧ್ಯದಲ್ಲಿ,ಸೂರ್ಯ ನಾರಾಯಣ ದೇವರು ಮತ್ತು ನವಗ್ರಹ ಈ ಸಾನಿಧ್ಯದಲ್ಲಿ ಇಲ್ಲಿಗೆ ಬರುವಂತಹ ಜನ ಇಂತಹ ಒಂದು ಆಶಯದಲ್ಲಿ ಒಂದು ಹಸರಿಕರಣದ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಡಿವಾಳ ರಾಜಯೋಗಿಂದ್ರ ಸ್ವಾಮಿ,ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿಗಳು ಕೂಡಾ ಮಾತನಾಡಿದ್ರು ,ಶಾಸಕ ಮಹಾಂತೇಶ ದೊಡಗೌಡರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಎಸಿಎಫ್ ಶಿವರುದ್ರಪ್ಪ ಕಬಾಡಗಿ, ಆರ್ ಎಫ್ಒ ವಾನಿಶ್ರೀ ಹೆಗಡೆ,ಉಪ ವಲಯ ಅರಣ್ಯಾಧಿಕಾರಿ ಸಂಜಯ್ ಮಗದುಮ್ಮ ಸೇರಿದಂತೆ ಇನ್ನಿತರ ಸರ್ಕಾರಿ ಅಧಿಕಾರಿಗಳು, ಕಿತ್ತೂರು ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಉಪಸ್ಥಿತರಿದ್ದರು.