ಮದುವೆ ಸಮಾರಂಭದಲ್ಲಿ ಸಾಮಾನ್ಯವಾಗಿ ಆಡಂಬರದ ಅಲಂಕಾರ ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಮದುವೆಯಲ್ಲಿ ಕನ್ನಡದ ಕಂಪು ಸೂಸುವ ಕನ್ನಡದ ವಾತಾವರಣವೇ ನಿರ್ಮಾಣವಾಗಿತ್ತು.

ಹೌದು ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ನಾಗಯ್ಯಾ ತೇರಣಿಮಠ ಅವರ ಮದುವೆ ಸಮಾರಂಭದಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡದ ಧ್ವಜಗಳು, ಕನ್ನಡದ ಶಾಲುಗಳು ರಾರಾಜಿಸುತ್ತಿದ್ದವು. ನಾಗಯ್ಯಾ ತೇರಣಿಮಠ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ರೂಪಾ ಹಿರೇಮಠ ಅವರನ್ನು ಮದುವೆಯಾಗಿದ್ದಾರೆ.

ಈ ಮದುವೆಯಲ್ಲಿ ಖಾನಾಪುರದ ಬ್ರಹ್ಮ ಮಠದ ಸಿದ್ದೇಶ್ವರ ಸ್ವಾಮಿಜಿ ಸೇರಿದಂತೆ ಹಲವಾರು ಮಠದ ಶ್ರೀಗಳು ಈ ಕನ್ನಡದ ಮನಸ್ಸುಗಳ ಮದುವೆಗೆ ಸಾಕ್ಷಿಯಾಗಿದ್ದರು.
ಮದುವೆಯಲ್ಲಿ ಗಂಡು ಹೆಣ್ಣು ಹೂಮಾಲೆ ಜೊತೆಗೆ ಕನ್ನಡದ ಶಾಲು ಹಾಕಿಕೊಂಡು ಕನ್ನಡದ ಮೇಲಿನ ತಮ್ಮ ಅಭಿಮಾನವನ್ನು ಪ್ರದರ್ಶಿಸಿದ್ದು ಸಧ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.