Belagavi

ಬೆಳಗಾವಿಯ ವಿಜಯಾ ಕಾಲೇಜಿನಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದೇನು…

Share

ಬೆಳಗಾವಿ ನಗರದಲ್ಲಿ ಹಿಜಾಬ್ ವಿವಾದ ಕುರಿತಂತೆ ಆತಂಕ ಸೃಷ್ಟಿಸಿದ್ದ ವಿಜಯಾ ಪ್ಯಾರಾ ಮೆಡಿಕಲ್ ಕಾಲೇಜಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ್ಯಾಯಾಲಯದ ಆದೇಶ ಪಾಲಿಸುವಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಬೆಳಗಾವಿಯ ವಿಜಯಾ ಪ್ಯಾರಾ ಮೆಡಿಕಲ್ ಕಾಲೇಜಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಇಂದು ಮುಂಜಾನೆ ಭೇಟಿ ನೀಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಚರ್ಚೆಯನ್ನು ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಹೈಕೋರ್ಟ್ ಆದೇಶದ ಕುರಿತು ವಿದ್ಯಾರ್ಥಿಗಳಗೆ ಮನವರಿಕೆ ಮಾಡಿದ್ದೇವೆ. ಗೇಟ್ ನಲ್ಲಿ ವಿದ್ಯಾರ್ಥಿಗಳನ್ನ ತಪಾಸಣೆ ಮಾಡದಂತೆ ಕಾಲೇಜು ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಹಿಜಾಬನ್ನು ಧರಿಸಿದ್ದ 12 ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡಿದ್ದೇನೆ.

ಅವರಿಗೆ ತರಗತಿಗೆ ಕುಳಿತುಕೊಳ್ಳಿ, ಪೆÇೀಷಕರ ಜತೆಗೆ ನಾವು ಮಾತನಾಡುತ್ತೇವೆ ಅಂತಾ ಹೇಳಿದ್ದೇವೆ. ವಿದ್ಯಾರ್ಥಿಗಳ ಪೆÇೀಷಕರನ್ನ ಕಚೇರಿಗೆ ಕರೆಯಿಸಿಕೊಂಡು ಮನವೊಲಿಸುವ ಕಾರ್ಯ ಮಾಡುತ್ತೇವೆ. ಪೆÇೀಷಕರು ನಂಬರ್ ತೆಗೆದುಕೊಂಡು ಕರೆಯಿಸಿಕೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ತರಗತಿ ಪ್ರಾರಂಭ ಆಗುತ್ತೆ ಎಲ್ಲಿ ಹೋಗಬೇಡಿ ಅಂತಾ ಪ್ರಾಂಶುಪಾಲರು ಹೇಳಿದ್ದಾರೆ. ವಿದ್ಯಾರ್ಥಿಗಳು ಹಿಜಾಬ್ ತೆಗೆಯಲು ಚರ್ಚೆ ಮಾಡಿ ಅಂತಾ ಹೇಳಿದ್ದೇನೆ. ಎಲ್ಲರೂ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿದ್ದಾರೆ ಎಂದರು.

ಇನ್ನು ಗೋಕಾಕ್‍ನಲ್ಲಿ ಹಿಜಾಬ್ ತೆಗೆಯುವ ವಿಚಾರಕ್ಕೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಗೋಕಾಕ್ ನಲ್ಲಿ ಕಾಲೇಜು ಹೊರಗೆ ಕುಳಿತು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ವಿದ್ಯಾರ್ಥಿಗಳನ್ನ ಕಾಲೇಜು ಒಳಗೆ ಕರೆದುಕೊಂಡು ಹೋಗುವಂತೆ ಗೋಕಾಕ್ ತಹಶಿಲ್ದಾರಗೆ ಸೂಚನೆ ನೀಡಿದ್ದೇನೆ. ಹೈಕೋರ್ಟ್ ಆದೇಶ ಪಾಲಿಸುವಂತೆ ತಿಳಿ ಹೇಳಿದ್ದೇವೆ ಎಂದರು.
 

Tags:

error: Content is protected !!