ಬೆಳಗಾವಿ ನಗರದಲ್ಲಿ ಇತ್ತೀಚೆಗೆ ಅಧಿವೇಶನ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದ ಘಟನೆಗೆ ಸಂಬಂದಿಸಿದಂತೆ ಬೆಳಗಾವಿ ಧರ್ಮವೀರ ಸಂಭಾಜಿ ಸರ್ಕಲ್‍ನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದ36 ಜನ ಆರೋಪಿಗಳಿಗೆ ಇಂದು ಹೈಕೋರ್ಟ್ ಶರತ್ತುಬದ್ದ ಜಾಮೀನು ನೀಡಿದೆ.

ನಗರದಲ್ಲಿ ನಡೆದ ಘಟನೆ ಕುರಿತಂತೆ ಬೆಳಗಾವಿಯ ಮಾರ್ಕೆಟ್ ಪೊಲೀಸರು ಬಾರತೀಯ ದಂಡ ಸಂಹಿತೆ ಪ್ರಕಾರ 36ಜನರ ಮೇಲೆ 143, 147, 148, 307, 353, 153, 336, 427, 435, 109, 504, 506, ಆರ್‍ಡಬ್ಲು 149, ಕರ್ನಾಟಕ ಪ್ರಿವೆನ್ಶೆನ್ ಆಫ್ ಡಿಸ್ಟ್ರಕ್ಷನ್ ಆಕ್ಟ್, ಮತ್ತು ಲಾಸ್ ಆಫ್ ಪ್ರಾಪರ್ಟಿ ಆಕ್ಟ್, ಸೆಕ್ಷೆನ್ 4ನಲ್ಲಿ ಸಾರ್ವಜನಿಕ ಆಸ್ತಿ ಹಾನಿ ಪ್ರಕರಣದಡಿ ರಮಾಕಾಂತ ಕುಂಡೋಸ್ಕರ್, ಭರತ್ ಮೇನ್ಸಿ, ಬಲವಂತ ಸಿಂದೋಳ್ಕರ್, ಸದೇಶ್ ನಿಲೇಶ್ಕರ್, ಮೇಘರಾಜ್ ಗುರವ್, ಸೇರಿ ಸುಮಾರು 36ಜನರ ಮೇಲೆ ಕೇಸ್ ದಾಖಲಿಸಿದ್ದರು. ಇವರ ಪರವಾಗಿ ವಕೀಲರು ಜಿಲ್ಲಾ ನ್ಯಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಈ ಸಂದರ್ಭದಲ್ಲಿ ಶ್ಯಾಮಸುಂದರ್ ಪತ್ತರ, ನಾಗರತ್ನಾ ಪತ್ತಾರ, ಹೇಮರಾಜ್ ಬೆಂಚಣ್ಣವರ್, ಎಸ್‍ಬಿ ಪಟ್ಟಣ್, ಶಂಕರ್ ಬಾಳಾನಾಯಕ್, ಚಿದಂಬರ್ ಹೊನಗೇಕರ್, ವಿಶಾಲ ಚೌಗಲೆ, ವಿಕೇಶ್ ತೇರಡಾಲ್ಕರ್, ನ್ಯಾ. ಜ್ಯೋತಿ ಬಾ ವಕಾಲತ್ತು ಹಾಕಿದ್ದರು. ಹೈ ಕೋರ್ಟ್‍ನ 6ನೆ ಮುನ್ಸಿಫ್ ನ್ಯಾಯಾಧೀಶರಾದ ವಿನಯ ಕುಂದಾಪೂರ್ ಎಲ್ಲಾ 36 ಜನಕ್ಕೆ ಶರತ್ತು ಬದ್ಧ ಜಾಮೀನು ನೀಡಿದ್ದಾರೆ.
ಇತ್ತೀಚೆಗೆ ಎರಡು ದಿನಗಳ ಹಿಂದೆಯಷ್ಟೇ ಇದೇ ಪ್ರಕರಣ ಸಂಬಂಧ ಶುಭಂ ಶೇಳಕೆ ಹಾಗೂ ಇತರರಿಗೆ ಜಾಮೀನಿ ಸಿಕ್ಕಿತ್ತು.
