Khanapur

ನಂದಗಡದಲ್ಲಿ ಗ್ರಾಮ ದೇವತೆ ಲಕ್ಷ್ಮೀ ದೇವಿಯ ೨೧ನೇ ಹುಟ್ಟುಹಬ್ಬ ಆಚರಣೆ

Share

ಖಾನಾಪೂರ ತಾಲೂಕಿನ ನಂದಗಡ ಗ್ರಾಮದೇವತೆ ಲಕ್ಷ್ಮೀ ದೇವಿಯ ೨೧ನೇ ಹುಟ್ಟುಹಬ್ಬವನ್ನ ವಿಜ್ರಂಭಣೆಯಿAದ ಆಚರಿಸಲಾಯಿತು.
ನಂದಗಡ ಗ್ರಾಮದೇವತೆ ಲಕ್ಷ್ಮೀ ದೇವಿಯ ೨೧ನೇ ಹುಟ್ಟುಹಬ್ಬವನ್ನ ವಿಜ್ರಂಭಣೆಯಿAದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಲಕ್ಷ್ಮೀ ಮಂದಿರದಲ್ಲಿ ಮಹೇಶ್ ಜೋಶಿ, ಪ್ರಶಾಂತ್ ಜೋಶಿ,ಎ.ಜೆ.ಗೋಕಾಕರ ಉಪಸ್ಥಿತಿಯಲ್ಲಿ ಹೊಮ ಅಭಿಷೇಕ ಹಾಗೂ ಪೂಜಾ ವಿಧಿ ವಿಧಾನಗಳು ನೆರವೇರಿದವು. ಈ ವೇಳೆ ಭಕ್ತರು ತಮ್ಮ ಬೇಡಿಕೆಯನ್ನು ದೇವಿಯಲ್ಲಿ ಕೇಳಿಕೊಂಡರು. ಸಂಪೂರ್ಣ ನಂದಗಡದ ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದು ಪೂಜಾವಿಧಿಯಲ್ಲಿ ಭಾಗಿಯಾಗಿದ್ದರು. ಮುಂಜಾನೆಯೊAದಲೇ ಉಡಿತುಂಬುವ ಕಾರ್ಯದಲ್ಲಿ ಮಗ್ನರಾಗಿದ್ದರು. ಕಿರಣ್ ಪಾಟೀಲ ದಂಪತಿ ಪೂಜಾ ವಿಧಿ ವಿಧಾನಗಳನ್ನು ನೇರವೆರೀಸಿದರು.


ಈ ಸಂದರ್ಭದಲ್ಲಿ ಲಕ್ಷ್ಮೀ ಜಾತ್ರಾಉತ್ಸವ ಕಮೀಟಿ ಅಧ್ಯಕ್ಷ ಪಿ.ಕೆ.ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರ ಪಾಟೀಲ್, ಹಿರಿಯರಾದ ಸಿ.ಜಿ.ವಾಲಿ ಸೇರಿದಂತೆ ಬಹುಸಂಖ್ಯೆಯಲ್ಲಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದು ದೇವಿ ಲಕ್ಷ್ಮೀ ಯ ೨೧ನೇ ಹುಟ್ಟುಹಬ್ಬವನ್ನು ವಿಜ್ರಂಭಣೆಯಿAದ ಆಚರಿಸಿದರು

Tags:

error: Content is protected !!