Kalaburgi

ತಮ್ಮ ಮೇಲೆ ಮಹಿಳೆ ಮಾಡಿದ ಆರೋಪಕ್ಕೆ ಬಿಜೆಪಿ ಶಾಸಕನ ಕಣ್ಣೀರು..!

Share

ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಬಿಜೆಪಿ ಶಾಸಕ ಕಣ್ಣೀರು ಹಾಕಿದ್ದಾರೆ.

ಹೌದು ಬಿಜೆಪಿ ಶಾಸಕ ರಾಜ್‍ಕುಮಾರ್ ಒಬ್ಬ ದೊಡ್ಡ ಫ್ರಾಡ್. ನನ್ನ ಮಗನಿಗೂ ಸೇಡಂ ಶಾಸಕನಿಗೂ ಸಂಬಂಧವಿದೆ ಎಂದು ಹೇಳಿಕೆ ನೀಡಿದ ಸಂತ್ರಸ್ತ ಮಹಿಳೆ, ನನ್ನ ಮಗನಿಗೆ 14 ವರ್ಷ, ಮಗ ಅಂತ ಶಾಸಕ ರಾಜ್ಕುಮಾರ್ ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದ್ದಾಳೆ. ಅಲ್ಲದೇ ಶಾಸಕರಿಂದ ನನಗೆ ಅನ್ಯಾಯವಾಗಿದೆ ಎಂದಿರುವ ಮಹಿಳೆ, ವಕೀಲ ಜಗದೀಶ್ ಸಂಪರ್ಕಿಸಿ ನ್ಯಾಯ ಕೊಡಿಸಲು ಮನವಿ ಮಾಡಿದ್ದಾಳೆ. ಪೆÇಲೀಸರು ನನ್ನನ್ನ ಠಾಣೆಯಲ್ಲಿ ಕೂಡಿಹಾಕಿದ್ದರು, ಗುಹೆ ರೀತಿ ಇತ್ತು. ವಿಧಾನಸೌದ ಠಾಣೆ ಪೆÇಲೀಸರು ನನ್ನನ್ನ ಕೂಡಿ ಹಾಕಿದ್ದಾರೆ. ನನ್ನ ಜೀವನವನ್ನೆಲ್ಲಾ ಹಾಳು ಮಾಡಿದ. ನನಗೆ ಜೀವನ ಕೊಡುವಂತೆ ನಾನು ಶಾಸಕರನ್ನ ಕೇಳಿದೆ. ರಾತ್ರಿ 9 ಗಂಟೆ ತನಕ ಪೆÇಲೀಸ್ ಠಾಣೆಯಲ್ಲೇ ಇದ್ದೆ.

9 ಗಂಟೆಯಾದ ಮೇಲೆ ನನ್ನನ್ನ ಠಾಣೆಯಿಂದ ಬಿಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆ, ಬಿಜೆಪಿ ಶಾಸಕ ರಾಜ್‍ಕುಮಾರ್ ಒಬ್ಬ ದೊಡ್ಡ ಫ್ರಾಡ್ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ರಾಜ್‍ಕುಮಾರ್ ಪಾಟೀಲ್, ವಿಧಾನಸೌದ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ 2 ಕೋಟಿ ರೂ.ಗೆ ಬ್ಲ್ಯಾಕ್‍ಮೇಲ್ ಮಾಡಿರುವ ಬಗ್ಗೆ ದೂರಿದ್ದಾರೆ. ಶಾಸಕರ ದೂರಿನ ಮೇರೆಗೆ ಮಹಿಳೆ ಮತ್ತು ಆಕೆಯ ಪತಿಯನ್ನು ವಿಚಾರಣೆ ಮಾಡಲಾಗಿದೆ.

ನನಗೆ ಬ್ಲ್ಯಾಕ್‍ಮೇಲ್ ಮಾಡಿದವರ ಬಗ್ಗೆ ಈಗ ಹೇಳುವುದಿಲ್ಲ. ಈ ಬಗ್ಗೆ ಪೆÇಲೀಸರಿಗೆ ಮಾಹಿತಿಯನ್ನು ನೀಡಿದ್ದೇನೆ. ನನ್ನ ವಿರುದ್ಧ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಆ ಮಹಿಳೆ ಕೂಡ ನ್ಯಾಯಕ್ಕಾಗಿ ಹೋರಾಟವನ್ನು ಮಾಡಲಿ. ಸಾಮಾಜಿಕ ಜಾಲತಾಮದಲ್ಲಿ ಹೋರಾಟ ಮಾಡೋದು ಬಿಟ್ಟು, ಕಾನೂನು ಪ್ರಕಾರ ಹೋರಾಟ ಮಾಡಲಿ. ಇದರ ಹಿಂದೆ ವಿಪಕ್ಷದ ಕೈವಾಡದ ಬಗ್ಗೆ ಏನೂ ಹೇಳೋದಿಲ್ಲ ಅಂತ ಕಲಬುರಗಿಯಲ್ಲಿ ರಾಜ್‍ಕುಮಾರ ಪಾಟೀಲ್ ತೇಲ್ಕೂರ್ ಕಣ್ಣೀರು ಹಾಕಿದ್ದಾರೆ.

Tags:

error: Content is protected !!