hubbali

ಜ್ಞಾನ ಭಂಡಾರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ ಹುಬ್ಬಳ್ಳಿ ಬಾಲಕ

Share

ಆತ ಇನ್ನೂ ಅಂಗಳದಲ್ಲಿ ಆಡುವ ಚಿಕ್ಕ ಬಾಲಕ. ಆದ್ರೆ ಆತನ ಕೀರ್ತಿ ಮಾತ್ರ ಆಕಾಶದೆತ್ತರಕ್ಕೆ ಬೆಳೆದಿದೆ. ಅಪಾರ ಜ್ಞಾನದಿಂದ ದೇಶವನ್ನೇ ತನ್ನತ್ತ ನೋಡುವಂತೆ ಮಾಡಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುವಂತ ಮಾತಿಗೆ ಸ್ಪೂರ್ತಿ ಎಂಬುವಂತೆ ಈ ಬಾಲಕ ಸಾಧನೆ ಮಾಡಿದ್ದಾನೆ. ಹಾಗಿದ್ದರೇ ಯಾರು ಆ ಬಾಲಕ ಆತನ ಪಾಂಡಿತ್ಯವಾದರೂ ಏನು ಅಂತ ತೋರಸ್ತೀವಿ ಈ ಸ್ಟೋರಿ ನೋಡಿ..

 ವಾಣಿಜ್ಯನಗರಿ ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದ ಸಮೃದ್ಧ ಶ್ರೀಕಾಂತ್ ಶೆಟ್ಟಿ ಎಂಬುವ ಬಾಲಕನೇ ತನ್ನ ಜ್ಞಾನ ಭಂಡಾರವನ್ನು ಪರಿಚಯಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿದ್ದಾನೆ. ಕೇವಲ ಎರಡುವರೆ ವರ್ಷದ ಇತ ಹದಿನೈದು ತರಹದ ಯೋಗಾಸನ ಮಾಡುತ್ತಾನೆ. ಅಲ್ಲದೇ ಗೃಹಗಳನ್ನು ಗುರುತಿಸಿ ಅವುಗಳ ಪರಿಚಯವನ್ನು ಮಾಡುತ್ತಾನೆ. ಅಲ್ಲದೆ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಅಳ್ಳುಹುರಿದಂತೆ ಉತ್ತರ ಕೊಡುವ ಇತ ನಮ್ಮ ರಾಜ್ಯದ ನದಿಗಳ ಹೆಸರನ್ನು ಸರಾಗವಾಗಿ ಹೇಳುತ್ತಾನೆ. ವಯಸ್ಸಿಗೂ ಮೀರಿದ ಇತನ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರ ಬಂದಿದೆ. ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು ಎಂಬುವಂತೆ ಮಗನ ಈ ಸಾಧನೆಗೆ ತಾಯಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

ಚಿಕ್ಕವಯಸ್ಸಿನಲ್ಲೇ ಸಾಕಷ್ಟು ಜ್ಞಾನ ಭಂಡಾರವನ್ನು ಹೊಂದಿರುವ ಇತನ ಸಾಧನೆ ನಿಜಕ್ಕೂ ಜನರಲ್ಲಿ ಅಚ್ಚರಿ ಮೂಡಿಸಿದೆ. ಅಲ್ಲದೆ ಹದಿನೈದು ಬಗೆಯ ಯೋಗದ ಆಸನವನ್ನು ಮಾಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ತಮ್ಮ ಜವಾಬ್ದಾರಿ ನಿರ್ವಹಣೆ, ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಕಾಳಜಿ ಸ್ವಲ್ಪ ಕಡಿಮೆಯಾಗುತ್ತಿದೆ. ಅದರಂತೆ ಮಕ್ಕಳು ಮೊಬೈಲ್ ಬಳಕೆಯಿಂದ ತಮ್ಮಲ್ಲಿರುವ ಕೌಶಲ್ಯವನ್ನು ಮರೆತು ಹೋಗುತ್ತಿದ್ದಾರೆ. ಆದರ ಸಮೃದ್ಧ ಮಾತ್ರ ಮೊಬೈಲ್ ನ್ನು ಮನರಂಜನೆಗಾಗಿ ಬಳಕೆ ಮಾಡದೇ ಮೊಬೈಲ್ ನಲ್ಲಿ ಸಾಕಷ್ಟು ಜ್ಞಾನವನ್ನು ಪಡೆದುಕೊಂಡು ದೇಶದ ಸಾಧಕ ಬಾಲಕರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ. ಮಗನ ಸಾಧನೆಗೆ ಬೆನ್ನೆಲುಬಾಗಿರುವ ಪಾಲಕರಿಗೆ ಮಗನ ಸಾಧನೆ ಹರ್ಷವನ್ನು ಇಮ್ಮಡಿಗೊಳಿಸಿದೆ.

ಹುಬ್ಬಳ್ಳಿ ಬಾಲಕನ ಅಪಾರವಾದ ಜ್ಞಾನವನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರವನ್ನು ನೀಡಿರುವುದು ನಿಜಕ್ಕೂ ವಿಶೇಷವಾಗಿದೆ. ನಮ್ಮ ಹುಬ್ಬಳ್ಳಿಯ ಸಮೃದ್ಧ ಶೆಟ್ಟಿಯ ಭವಿಷ್ಯ ಮತ್ತಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸಲಿ ಅಲ್ಲದೇ ಗಿನ್ನಿಸ್ ದಾಖಲೆಯಂತ ಹಲವಾರು ಪುರಸ್ಕಾರಗಳು ಲಭಿಸಲಿ ಎಂಬುವುದು ನಮ್ಮ ಆಶಯ.

Tags:

error: Content is protected !!