State

ಗುಂಡಾ ಶಿವಕುಮಾರ್, ಜಾತಿವಾದಿ ಸಿದ್ದರಾಮಯ್ಯ ಬರುತ್ತಾನಾ..? ಮುಂದುವರಿದ ಈಶ್ವರಪ್ಪ ವಾಗ್ದಾಳಿ..!

Share

ರಾಜ್ಯ ಮತ್ತು ದೇಶ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಕರ್ನಾಟಕ ವಿಧಾನಸಭೆಗೆ ಗೂಂಡಾ ಶಿವಕುಮಾರ್ ಬರುತ್ತಾನಾ..? ಆ ಜಾತಿವಾದಿ ಸಿದ್ದರಾಮಯ್ಯ ಬರುತ್ತಾನಾ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

ಭದ್ರಾವತಿ ಬಿಜೆಪಿ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಈಶ್ವರಪ್ಪ ಜಿಲ್ಲಾಧ್ಯಕ್ಷರು ನಾಳೆ ಯಾರು ಜಿ.ಪಂ. ಅಭ್ಯರ್ಥಿ ಘೋಷಣೆ ಮಾಡುವ ತನಕ ಟಿಕೇಟ್‍ನ್ನು ಯಾರು ಬೇಕಾದ್ರೂ ಕೇಳಬಹುದು. ಟಿಕೇಟ್ ಕೇಳೋದು ತಪ್ಪಲ್ಲ, ಆದರೆ ಘೋಷಣೆ ಮಾಡಿದ ನಂತರ ಅಭ್ಯರ್ಥಿ ಪರವಾಗಿ ಹಗಲು, ರಾತ್ರಿ ದುಡಿಯುತ್ತೇವೆ, ಗೆಲ್ಲುತ್ತೇವೆ ಎನ್ನಬೇಕು. ಅದೇ ರೀತಿ ವಿಧಾನಸಭೆ ಚುನಾವಣೆ ಕೂಡ ನಡೆಯುತ್ತದೆ ಎಂದರು.

ಇನ್ನು ರಾಜ್ಯ ಮತ್ತು ದೇಶ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಕರ್ನಾಟಕ ವಿಧಾನಸಭೆಗೆ ಗೂಂಡಾ ಶಿವಕುಮಾರ್ ಬರುತ್ತಾನಾ..? ಆ ಜಾತಿವಾದಿ ಸಿದ್ದರಾಮಯ್ಯ ಬರುತ್ತಾನಾ..? ಅವರೇ ಹೊಡೆದುಕೊಳ್ಳುತ್ತಿದ್ದಾರೆ. ಈ ಗೂಳಿ-ಗೂಂಡಾಗಳನ್ನು ಪಕ್ಕಕ್ಕೆ ಸೇರಿಸಿ ಭದ್ರಾವತಿ ರಾಷ್ಟ್ರೀಯ ವಿಚಾರದ ಪಕ್ಷ. ರಾಷ್ಟ್ರದ ವಿಚಾರದ ಅಭ್ಯರ್ಥಿಯನ್ನು ಗೆಲ್ಲಿಸಲು ತೀರ್ಮಾನಿಸಿ ಬಂದಿದ್ದಿರಿ ಎಂದು ಕಾರ್ಯಕರ್ತರನ್ನು ಹುರುದುಂಬಿಸಿದರು.

Tags:

error: Content is protected !!