Khanapur

ಖಾನಾಪೂರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

Share

-ಹೌದು ಖಾನಾಪೂರ ತಾಲೂಕಾ ಆಡಳಿತ ಸೇರಿದಂತೆ ಇನ್ನಿತರರಿಂದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದರು.

ಹೌದು ಖಾನಾಪೂರ ತಾಲೂಕಾ ಆಡಳಿತ ವತಿಯಿಂದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪೋಟೋ ಪೂಜೆ ತಹಶೀಲ್ದಾರ್ ಪ್ರವೀಣ್ ಜೈನ್ ನೇರವೆರಿಸಿದರು.ತದನಂತರ ಶಿವಸ್ಮಾರಕ ವೃತ್ತದಲ್ಲಿ ಇರುವ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ತದನಂತರ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಅವರು ಶಿವಸ್ಮಾರಕದಲ್ಲಿರುವ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಜಹರ್ ಖಾನಾಪೂರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಬೈಲೂರಕರ ಅವರು ಕೂಡಾ ಶಿವಾಜಿ ಮಹಾರಾಜರ ಪುತ್ಥಳಿಗೆ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಸೇರಿದಂತೆ ಶಿವಪ್ರೇಮಿಗಳು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶಿವಾಜಿ ಮಹಾರಾಜರ 392ನೇ ಆಚರಣೆ ಮಾಡಿದರು.

Tags:

error: Content is protected !!