Khanapur

ಖಾನಾಪುರ: ರಾಷ್ಟ್ರ ರಾಜಕಾರಣದಲ್ಲೂ ಸೈ, ಅತ್ತೆ ಮನೆಯಲ್ಲೂ ಜೈ; ಸೊಸೆಯಾಗಿ ಮಿಂಚುತ್ತಿದ್ದಾರೆ ಡಾ. ಅಂಜಲಿ ನಿಂಬಾಳ್ಕರ್!

Share

ರಾಷ್ಟ್ರ ರಾಜಕಾರಣದ ಬಿಡುವಿಲ್ಲದ ವೇಳಾಪಟ್ಟಿ, ಹಲವು ರಾಜ್ಯಗಳ ಎಐಸಿಸಿ ಉಸ್ತುವಾರಿ ಜವಾಬ್ದಾರಿ.. ಇಷ್ಟೆಲ್ಲಾ ಒತ್ತಡದ ನಡುವೆಯೂ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ತಮ್ಮ ಸಂಸಾರದ ಕರ್ತವ್ಯವನ್ನು ಮರೆತಿಲ್ಲ. ಅತ್ತೆ ಮನೆಯಲ್ಲಿ ಒಬ್ಬ ಸಾಮಾನ್ಯ ಸೊಸೆಯಾಗಿ ಅವರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ದೃಶ್ಯ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ರಾಜಕೀಯದ ಚತುರತೆಯ ಜೊತೆಗೆ ಒಬ್ಬ ಮಾದರಿ ಗೃಹಿಣಿಯಾಗಿಯೂ ಕಾಣಿಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ, ಅತ್ತೆಯ ಮನೆಯಲ್ಲಿ ಸೊಸೆಯ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ಮನೆಯಲ್ಲಿ ಶುಂಠಿ ಚಹಾದೊಂದಿಗೆ ಮೇಥಿ ಪರಾಠಗಳನ್ನು ತಯಾರಿಸುತ್ತಾ ಕುಟುಂಬದವರನ್ನು ಸತ್ಕರಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ. ರಾಜಕೀಯದ ಉನ್ನತ ಸ್ಥಾನದಲ್ಲಿದ್ದರೂ, ಮನೆಯಲ್ಲಿ ಒಬ್ಬ ಸಾಮಾನ್ಯ ಗೃಹಿಣಿಯಂತೆ ಶ್ರಮಿಸುತ್ತಿರುವುದು ಅವರ ಸರಳತೆಗೆ ಸಾಕ್ಷಿಯಾಗಿದೆ.

Tags:

error: Content is protected !!