ಹಿಜಾಬ್ ಬಗ್ಗೆ ಹೈಕೋರ್ಟನ ತೀರ್ಪು ಬರುವವರೆಗೆ ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ ನವದೆಹಲಿಯ ಕರ್ನಾಟಕ ಭವನದಲ್ಲಿ ಹಿಜಾಬ್ ಮತ್ತು ಕೇಸರಿ ವಿವಾದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ ಹಿಜಾಬ ಮತ್ತು ಕೇಸರಿ ವಿವಾದದ ಹಿನ್ನಲೆಯಲ್ಲಿ ಹೈಕೋರ್ಟನ ತೀರ್ಪು ಬರುವವರೆಗೆ ವಿದ್ಯಾರ್ಥಿಗಳು ಶಾಂತತೆಯನ್ನು ಕಾಪಾಡಿಕೊಳ್ಳಬೇಕು. ಯಾರು ಕೂಡ ಪ್ರಚೋದನೆಯ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿಕೊಂಡರು.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಬೇಟಿಯಾಗಿದ್ದೇನೆ ಕೈಗಾರಿಕಾಗಳಿಗೆ ರಿಯಾಯಿತಿ ನೀಡಲಾಗುವುದು, ವಿಶೇಷವಾಗಿ ಪ್ರೊಡಕ್ಷನ್ ಲಿಂಕ್ ಇನಸೆನೆಟಿವ್ಸ್ ಕೊಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ನಿಯೋಗದಲ್ಲಿ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತು ಶಂಕರಪಾಟೀಲ್ ಮುನೇನಕೊಪ್ಪ ಅವರು ಇದ್ದರು. ಅವರ ಜೊತೆ ಚರ್ಚಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬೇರೆ ಬೇರೆ ರಾಜ್ಯಗಳಲ್ಲಿ ಈ ಬಗ್ಗೆ ತೀರ್ಪು ಬಂದಿದೆ. ಕರ್ನಾಟಕದಲ್ಲಿ ನಡೆದಿರುವ ಡ್ರೇಸ್ ಕೋಡ್‍ಗಳ ಬಗ್ಗೆ ಕೋರ್ಟನಲ್ಲಿ ತೀರ್ಪು ಬರಲಿದೆ ಈಗ ನಮ್ಮ ಹೈಕೋರ್ಟನಲ್ಲಿ ಹೇರಿಂಗ್ ಆಗುತ್ತಿದೆ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಶಾಂತತೆಯನ್ನು ಕಾಪಾಡಬೇಕು. ನಾಳೆಯ ದಿನ ಎಲ್ಲರೂ ಒಂದೇ ತರಗತಿಗಳಲ್ಲಿ ಕುಳಿತು ಕಲಿಯುತ್ತಿರಿ ಅದಕ್ಕೆ ಯಾವದೇ ರೀತಿಯ ಗಲಭೆ ಆಗದಂತೆ ಶಾಂತಿ ಸುವ್ಯವಸ್ಥೆಗೆ ತೊಂದರೆಯಾಗದಂತೆ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ನೋಡೊಕೊಳ್ಳಬೇಕು. ಇದು ಬಹಳ ಸೂಕ್ಷ್ಮ ವಿಚಾರ ಯಾರು ಕೂಡ ಪ್ರಚೋದನೆ ಮಾಡಬಾರದು ಪೋಲಿಸರಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ನಿದೇಶನ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಒಟ್ಟಿನಲ್ಲಿ ಕೋರ್ಟ ತೀರ್ಪು ಬರೋವರೆಗೂ ಯಾರೂ ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ರಾಜ್ಯದ ಜನತೆಯಲ್ಲಿ ಸಿಎಂ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.