ಕೆಪಿಟಿಸಿಎಲ್ ಹಾಗೂ ಹೆಸ್ಕಾಂನ ಮಹಿಳಾ ನೌಕರರಲ್ಲಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ದೈಹಿಕ ಚಟವಟಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ ನಗರದಲ್ಲಿ ಕೆಪಿಟಿಸಿಎಲ್ ಹಾಗೂ ಹೆಸ್ಕಾಂನ ಮಹಿಳಾ ನೌಕರರಿಗಾಗಿ ಫೆಬ್ರುವರಿ 11ರಂದು ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳಾ ನೌಕರರಲ್ಲಿ ಮಾನಸಕ ಒತ್ತಡ ಕಡಿಮೆ ಮಾಡಿ ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಂದ್ಯಾವಳಿಯಲ್ಲಿ ಒನಕೆ ಒಬವ್ವ, ಕಿತ್ತೂರು ರಾಣಿ ಚೆನ್ನಮ್ಮಾ, ರಾಣಿ ಅಬ್ಬಕ್ಕಾ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ತಂಡಗಳು ಭಾಗಿಯಾಗಿದ್ದವು.
ಒನಕೆ ಒಬವ್ವ ತಂಡದಿಂದ ಸುಮಂಗಲಾ, ಕಿತ್ತೂರು ರಾಣಿ ಚೆನ್ನಮ್ಮಾ ತಂಡದಿಂದ ಸಂಗಮಿತ್ರಾ, ರಾಣಿ ಅಬ್ಬಕ್ಕಾ ತಂಡದಿಂದ ಅಪರ್ಣಾ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ತಂಡದಿಂದ ಫಿರ್‍ದೌಸ್ ತಂಡಗಳ ನಾಯಕಿಯರಾಗಿದ್ದರು.
ಕ್ರಿಕೆಟ್ ಪಂಧ್ಯಾವಳಿಯ ಫೈನಲ್ ಪಂದ್ಯದಲ್ಲಿ ಒನಕೆ ಒಬ್ಬವ್ವ ತಂಡ ವಿಜಯಶಾಲಿಯಾಯಿತು. ನಾಯಕಿ ಸುಮಂಗಲಾ. ನಾಗರತ್ನಾ ಹೊಸಳ್ಳಿ, ವೈಶಾಲಿ, ನೇತ್ರಾವತಿ, ಶಾಲ್ಮಲಾ, ಸಪ್ನಾ, ಮಂಜುಳಾ ಕೆ, ಲಕ್ಷ್ಮಿ ಕೋಲೆ, ರೇಣು ಹಣಪುರೆ ಮೊದಲಾದವರು ವಿಜಯ ಸಂಭ್ರಮಾಚರಿಸಿದರು.