ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಬಸ್ ಸಂಚಾರ ಸೇವೆ ಸ್ಥಗಿತಗೊಳಿಸಲಾಗಿತ್ತು .ಆದರೆ ಈಗ ಕಳೆದ 2 ದಿನಗಳಿಂದ ಮತ್ತು ಕರ್ನಾಟಕದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಬಸ್ ಸಂಚಾರ ಸೇವೆ ಪ್ರಾರಂಭಿಸಿದ್ದರಿಂದ ಪ್ರಯಾಣಿಕರಲ್ಲಿ ಸಂತಸ ಮೂಡಿದೆ.

ಕೊರೊನಾ ಹೆಸರಿನಲ್ಲಿ ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಚರಿಸುತ್ತಿರುವ ವಾಹನಗಳನ್ನು ಸ್ಥಗಿತಗೊಳಿಸಿದರು. ರಾಜ್ಯದ ಗಡಿಯಲ್ಲಿ ವಾಹನಗಳನ್ನು ತಡೆದು ಅಲ್ಲಿ ಪ್ರಯಾಣಿಕರನ್ನು ಬೇರೆ ವಾಹನದಲ್ಲಿ ವರ್ಗಾಯಿಸಿ ಕರ್ನಾಟಕಕ್ಕೆ ಕಳಿಸುತ್ತಿದ್ದರು. ಇದರಿಂದ ರಾಜ್ಯದ ಆಡಳಿತದ ಬಗ್ಗೆ ಹಿಡಿಶಾಪ ಹಾಕುತ್ತಿದ್ದರು. ನೇರವಾಗಿ ಪ್ರಯಾಣ ಪ್ರಾರಂಭಿಸಲು ಶಾಸಕರು ಜನಪ್ರತಿನಿಧಿಗಳು ಕೆಲ ಸಂಘಟನೆಗಳು ಚರ್ಚಿಸಿದರು ಆದರೆ ಇದು ಒಂದು ಸರ್ಕಾರದ ನಿಲುವು ಎಂದು ಹೇಳಿ ಜಿಲ್ಲಾಧಿಕಾರಿಗಳು, ಪೋಲಿಸ್ ಪ್ರಮುಖರು ಜನರ ಸಮಸ್ಯೆಗಳಿಗೆ ಸ್ಪಂದಿಸಿರಲಿಲ್ಲ. ಈಗ ಕೊರೊನಾ ಇಳಿಮುಖವಾಗಿದ್ದು, ಎರಡು ರಾಜ್ಯಗಳಲ್ಲಿ ಸಂಚಾರ ಸೇವೆ ಪ್ರಾರಂಭಿಸಿದ್ದಾರೆ.
ಕಾಗವಾಡ ಬಸ್ ನಿಲ್ದಾಣದ ನಿಯಂತ್ರಕರಾದ ಎಸ್. ಬಿ. ಗಸ್ತಿ ಅವರು ಮಾತನಾಡಿ ಕಳೆದ 2 ವರ್ಷಗಳ ಬಳಿಕ ಬಸ್ ಸಂಚಾರ ಸೇವೆ ಆರಂಭಿಸಲಾಗಿದೆ. ಪ್ರತಿದಿನ 575 ಬಸ್ಸುಗಳು ಕರ್ಮಾಟಕ ರಾಜ್ಯದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಪ್ರಯಾಣ ಬೆಳಸುತ್ತವೆ. ಸಂಚಾರ ಸೇವೆ ಸ್ಥಗಿತಗೊಳಿಸಿದ್ದರಿಂದ ಅನೇಕ ಪ್ರಯಾಣಿಕರು ಖಾಸಗಿ ವಾಹನಗಳ ಮುಖಾಂತರ ಅವರು ಕೇಳಿದಷ್ಟು ಹಣ ನೀಡಿ ಪ್ರಯಾಣ ಬಳಸಲಾಗುತ್ತಿತ್ತು. ಇದರಿಂದ ಬಹಳಷ್ಟು ತೊಂದರೆಗಳು ಅನುಭವಿಸಿದ್ದರು.
ಮಿರಜ್, ಸಾಂಗ್ಲಿ ಪಟ್ಟಣಗಳಲ್ಲಿ ಕರ್ನಾಟಕದ ಜನರು ಹೆಚ್ಚಾಗಿ ಆರೋಗ್ಯ ಉಸಿರಾಟ ಸಮಸ್ಯೆಯನ್ನು ತೋರಿಸಲು ಹೋಗಿಬರುತ್ತಾರೆ. ಎಲ್ಲ ರೋಗಿಗಳಿಗೆ ಉಸಿರಾಟಸ ತೊಂದರೆಯಾಗಿತ್ತು. ಈಗ ಬಸ್ ಸಂಚಾರ ಸೇವೆ ಪ್ರಾರಂಭಿಸಿದ್ದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಮಹಾರಾಷ್ಟ್ರ ರಾಜ್ಯದ ಸಾರಿಗೆ ಇಲಾಖೆ ಕಾರ್ಮಿಕರು ಮುಷ್ಕರ ಹೂಡಿದ್ದಾರೆ ಮುಷ್ಕರ ಇನ್ನೂ ಅಂತ್ಯಗೊಂಡಿಲ್ಲ. ಆದರೆ ಕರ್ನಾಟಕದ ಆರಾಧ್ಯದೇವತೆ ಚಿಂಚಲಿ ಮಾಯಕ್ಕದೇವಿ ದರ್ಶನಕ್ಕಾಗಿ ವಿಶೇಷ ಬಸ್ಸುಗಳು ನೀಡಿದ್ದಾರೆ. ಇದರಿಂದ ಎರಡು ರಾಜ್ಯಗಳಲ್ಲಿ ಮತ್ತು ಬಸ್ ಪ್ರಯಾಣ ಪ್ರಾರಂಭಿಸಿದ್ದರಿಂದ ಜನರಲ್ಲಿ ಸಂತಸ ಮೂಡಿದೆ ಎಂದು ಕಂಟ್ರೋಲರ್ ಎಸ್. ಬಿ. ಗಸ್ತಿ ಹೇಳಿದರು.
