ಅವಳಿ ನಗರದ ಜನರು ತಮ್ಮ ಮನೆಗಳ ಇ- ಸ್ವತ್ತು ಉತಾರ್ ತೆಗೆದುಕೊಳ್ಳಲು ಜೋನಲ್ ದಿಂದ ಪಾಲಿಕೆಗೆ, ಪಾಲಿಕೆಯಿಂದ ಜೋನಲ್‌ಗೆ ಅಲೆದಾಡುವ ಪ್ರಸಂಗ ಎದುರಾಗಿದೆ.

ಹೌದು, ಕೆಲವೇ ತಿಂಗಳುಗಳಲ್ಲಿ ಆರ್.ಟಿ.ಸಿ ಬಂದ್ ಆಗಲಿದ್ದು, ಸಾರ್ವಜನಿಕರು ಸರ್ಕಾರದಿಂದ ಇ-ಸ್ವತ್ತು ಪಡೆದುಕೊಳ್ಳಬೇಕಾದರೇ ಜೋನಲ್ ಕಛೇರಿ ಹಾಗೂ ಪಾಲಿಕೆಗೆ ಅಲೆದಾಡಿ ಇ-ಸ್ವತ್ತು ಸಿಗದೆ ಪರದಾಡುವಂತಾಗಿದೆ. ಇ-ಸ್ವತ್ತು ಪಡೆಯಲಿಕ್ಕೆ ಮೊದಲಿನ ಕ್ಕಿಂತ ಸದ್ಯ ಸರ್ಕಾರ ಆಧುನಿಕ ರೂಪುರೇಷೆ ನೀಡಿದ್ದು, ಇದಾದ ನಂತರ ಕೆಲಸದಲ್ಲಿ ವಿಳಂಬವಾಗುತ್ತಿದೆ. ಇದರ ಫಲವಾಗಿ ಸರಿಯಾದ ಸಮಯಕ್ಕೆ ಜಮೀನು, ಪ್ಲಾಟ್, ಮನೆಗಳ ಉತಾರ್ ಪತ್ರಗಳು ಸಿಗದೇ ಸಮಸ್ಯೆಯನ್ನುಂಟು ಮಾಡಿದೆ.
ಜನರು ಬ್ಯಾಂಕಿನಲ್ಲಿ ಲೋನ್ ಸೇರಿದಂತೆ ವಿವಿಧೆಡೆ ಇ-ಸ್ವತ್ತು ಕೇಳುತ್ತಿದ್ದಾರೆ. ಸಂಬಂಧಿಸಿದ ಜೋನಲ್ ಕಚೇರಿಗೆ ಹೋದ್ರೇ ಅಧಿಕಾರಿಗಳು ಇದ್ಯಾವುದೇ ಸಂಬಂಧವಿಲ್ಲದ ರೀತಿಯಲ್ಲಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

ಖಾಲಿ ಜಾಗ, ಮನೆಗಳಿಗೆ ಮಾತ್ರ ಇ-ಸ್ವತ್ತು ಬರುತ್ತಿದ್ದು, ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಮಳಿಗೆಗೆ ಇ-ಸ್ವತ್ತು ಬರುತ್ತಿಲ್ಲ ಎಂಬುದು ಗ್ರಾಹಕರ ಅಳಲಾಗಿದೆ. ಅಲ್ಲದೇ ಲಕ್ಷಾಂತರ ರೂಪಾಯಿ ಮನೆ ಖರೀದಿ ಮಾಡಿದರೇ ಇ-ಸ್ವತ್ತು ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ಗ್ರಾಹಕರು ಮನೆ ಹಾಗೂ ವಾಣಿಜ್ಯ ಮಳಿಗೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸರ್ಕಾರ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.
ಕೂಡಲೆ ಸಂಬಂಧಿಸಿದ ಕಂದಾಯ ಇಲಾಖೆ, ಮಹಾನಗರ ಪಾಲಿಕೆ, ಎಲ್ಲ ವಲಯ ಕಚೇರಿ ಬಗ್ಗೆ ಪರಿಶೀಲನೆ ನಡೆಸಿ, ಜನರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಲಾಷೆಯಾಗಿದೆ…