ಇಂದು ಶುಭ ಮಂಗಳ . ಈ ಶುಭ ದಿನ ಶ್ರೀ ರೇಣುಕಾ ಎಲ್ಲಮ್ಮ , ಆಂಜನೇಯ, ಗಣೇಶ, ದರ‍್ಗಾ ಮಾತೆ, ಕಾಳಿ ದೇವಿಯ ವಿಶೇಷ ಆರಾಧನೆ ನಡೆಯುತ್ತದೆ. ಈ ದಿನದಂದು ಭಕ್ತರು ಉಪವಾಸವನ್ನು ಆಚರಿಸಿ, ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಮಂಗಳವಾರ ಹೆಚ್ಚಾಗಿ ಶ್ರೀ ರೇಣುಕಾ ಎಲ್ಲಮ್ಮ , ಹನುಮಂತನನ್ನು ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಮಂಗಳವಾರದ ಅಧಿಪತಿ ಮಂಗಳ ಗ್ರಹನಾಗಿದ್ದಾನೆ. ಮಂಗಳನ ದುಷ್ಪರಿಣಾಮವನ್ನು ನಿಯಂತ್ರಿಸಲು ಈ ದಿನ ಆಂಜನೇಯನನ್ನ ಹೆಚ್ಚಾಗಿ ಪೂಜಿಸಲಾಗುತ್ತದೆ.
ಮಂಗಳವಾರ ಹನುಮನನ್ನು ಹೇಗೆ ಪೂಜಿಸಬೇಕು..? ಮಂಗಳವಾರ ಪೂಜೆಯ ಪ್ರಯೋಜನವೇನು..? ವೃತದ ವಿಧಾನ ಏನು ?
ಉಪವಾಸ ವ್ರತ ಮಾಡುವ ವಿಧಾನ:
ಇದು ಅತ್ಯಂತ ಸರಳ ವಿಧಾನವಾಗಿದೆ. ಮಂಗಳವಾರದಂದು ಆಂಜನೇನನ್ನು ಪೂಜಿಸುವವರು ವ್ರತದ ಲಾಭವನ್ನು ಪಡೆಯಲು ಸತತವಾಗಿ ೨೧ ಮಂಗಳವಾರ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಸರ‍್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ, ಉಪವಾಸ ವ್ರತವನ್ನು ಕೈಗೊಳ್ಳುವುದಾಗಿ ಸಂಕಲ್ಪ ಮಾಡಲಾಗುತ್ತದೆ.ಮನೆಯ ಈಶಾನ್ಯ ಮೂಲೆಯಲ್ಲಿ ಶ್ರೀ ಆಂಜನೇಯನಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಪೂಜೆಗೂ ಮುನ್ನ ಪೂಜಾ ಸ್ಥಳವನ್ನು ಶುದ್ದೀಕರಿಸಿ, ಸ್ವಲ್ಪ ಪವಿತ್ರ ಗಂಗಾ ಜಲವನ್ನು ಸಿಂಪಡಿಸಲಾಗುತ್ತದೆ. ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದರೆ ಉತ್ತಮ ಎನ್ನಲಾಗುತ್ತದೆ. ವಿಗ್ರಹದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಕೆಂಪು ಹೂವುಗಳನ್ನು ಅಥವಾ ಹೂವಿನ ಹಾರವನ್ನು ರ‍್ಪಿಸಲಾಗುತ್ತದೆ. ಆಂಜನೇಯನನ್ನು ಮೆಚ್ಚಿಸಲು ಹನುಮಾನ್ ಚಾಲೀಸಾ ಅಥವಾ ಹುನುಮನ ಮಂತ್ರವನ್ನು ಪಠಿಸಲಾಗುತ್ತದೆ. ಪ್ರರ‍್ಥನೆಯ ನಂತರ ಆಂಜನೇಯನಿಗೆ ರ‍್ಪಿಸಿದ ನೈವೇದ್ಯವನ್ನು ಪ್ರಸಾದವಾಗಿ ಕುಟುಂಬದ ಸದಸ್ಯರೊಂದಿಗೆ ಹಂಚಲಾಗುತ್ತದೆ. ಹೀಗೆ ಮಾಡುವುದರಿಂದ ಮನೋಕಾಮನೆಗಳು ಪರ‍್ಣಗೊಳ್ಳುತ್ತವೆ ಎಂಬ ಪ್ರತೀತಿ ಇದೆ .