ಆಕಾಶದಲ್ಲಿ ನಿಗೂಢ ಬೆಳಕಿನ ಚಲನೆ ಕಂಡು ಬಂದಿದೆ. ಭೂಮಿಯ ಸಮೀಪದಲ್ಲೇ ಚಲಿಸಿ ಮಾಯವಾದ ನಿಗೂಢ ಬೆಳಕೊಂದು ಆಶ್ಚರ್ಯ ಮೂಡಿಸಿದೆ. ಮಿಸೈಲ್ ಚಲಿಸೋ ಮಾದರಿಯಲ್ಲಿ ಚಲಿಸಿದ ರೀತಿಯಲ್ಲಿ ಬೆಳಕು ಕಂಡು ಬಂದಿರುವ ಘಟನೆ ವಿಜಯಪುರ ಜಿಲ್ಲೆಯ ಕೋಲ್ಹಾರ ಪಟ್ಟಣದ ಬಳಿ ನಡೆದಿದೆ. ಸಿಡಿತಲೆಗಳ ಮಾದರಿ ಹೋಲುವಂತಿದ್ದ ಬೆಳಕೊಂದು ಸಂಚರಿಸಿದೆ. ಇಂದು ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಆಕಾಶದಲ್ಲಿ ಕಂಡು ಬಂದ ಬೆಳಕನ್ನು ಕಂಡು ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ. ಇನ್ನೂ ಇದು ಏಲಿಯನ್ ಇರಬಹುದಾ? ಅನ್ಯ ಗ್ರಹದ ತುಣುಕು ಇರಬಹುದಾ ಎಂದು ಜನರು ಚರ್ಚೆ ಮಾಡುತ್ತಿದ್ದಾರೆ. ನಸುಕಿನ ಜಾವದ ಮಸುಮಬ್ಬಲ್ಲಿ ಚಲಿಸಿದ ಬೆಳಕಿನ ಕುರಿತು ಸ್ಪಷ್ಟವಾಗಿ ತಿಳಿಯದ ಬೆಳಕಿನ ಚಲನೆ ಕುರಿತು ಸದ್ಯ ವೈರಲ್ ಆಗಿದೆ.