social

ಅಶ್ಲೀಲ ಸಿಡಿ ಪ್ರಕರಣ:ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಿಡಿ ಲೇಡಿ..!

Share

ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಕೈತಪ್ಪಿರುವ ಸಚಿವ ಸ್ಥಾನವನ್ನು ಮರಳಿ ಗಳಿಸಲು ಸಿಡಿ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸರ್ವಪ್ರಯತ್ನ ನಡೆಸಿರವ ಬೆನ್ನಲ್ಲೇ ಪ್ರಕರಣವೇ ಎಲ್ಲಿ ಕೈತಪ್ಪುತ್ತದೆಯೋ ಎಂದು ಆತಂಕಗೊಂಡಿರುವ ಸಿಡಿ ಯುವತಿ ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಲು ಕಳೆದ ವಾರ ಫೆಬ್ರವರಿ 3ರಂದು ಹೈಕೋರ್ಟ್ ಅನುಮತಿ ನೀಡಿತ್ತು. ಆದರೆ ಬಾಧಿತ ಯುವತಿ ಈ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಪ್ರಕರಣವನ್ನು ಸೋಮವಾರ ಫೆಬ್ರವರಿ 14ರಂದು ಪ್ರಕರಣ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ಕೇಳಿಬಂಧಿವೆ.
ರಮೇಶ್ ಜಾರಕಿಹೊಳಿ ಕೋರಿಕೆ ಮೇರೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಆರೋಪಿ ಕೋರಿಕೆಯಂತೆ ಎಸ್ಐಟಿ ರಚಿಸಿರುವ ಕ್ರಮವೇ ಅಸಿಂಧು. ಇಂತಹ ಎಸ್ಐಟಿ ನಡೆಸಿರುವ ತನಿಖಾ ವರದಿಗೆ ಅದರ ಮುಖ್ಯಸ್ಥರಾದ ಸೌಮೇಂದು ಮುಖರ್ಜಿಯವರೇ ಸಹಿ ಹಾಕಿರಲಿಲ್ಲ. ಹೈಕೋರ್ಟ್ ಈ ಕುರಿತು ವಿಚಾರಣೆ ನಡೆಸಿದಾಗ ಮೊದಲಿಗೆ ತನಗೂ, ವರದಿಗೂ ಸಂಬಂಧವಿಲ್ಲ ಎಂಬಂತೆ ಹೇಳಿಕೆ ನೀಡಿದ್ದ ಅಧಿಕಾರಿ ನಂತರ ಅದೇ ವರದಿಯನ್ನ ಅನುಮೋದಿಸಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ಎಸ್ಐಟಿ ತನಿಖೆ ಮೇಲೆ ಹಲವು ಅನುಮಾನಗಳು ಮೂಡುತ್ತವೆ.

ಇನ್ನು, ಎಸ್ಐಟಿ ರಚನೆಯ ಸಿಂಧುತ್ವವನ್ನೇ ಪ್ರಶ್ನೆ ಮಾಡಲಾಗಿತ್ತು. ಆದ್ದರಿಂದಲೇ ಹೈಕೋರ್ಟ್ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ತಡೆ ನೀಡಿತ್ತು. ಆದರೆ, ಇದೀಗ ಎಸ್ಐಟಿಯ ತನಿಖಾ ವರದಿಯನ್ನು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಿದೆ. ಎಸ್ಐಟಿ ರಚನೆ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ ಇನ್ನೂ ಬಾಕಿ ಇದೆ. ಒಂದು ವೇಳೆ ಎಸ್ಐಟಿ ರಚಿಸಿರುವ ಕ್ರಮವೇ ಅಸಿಂಧುವಾದರೆ ತನಿಖಾ ವರದಿಯೂ ಅಸಿಂಧುಗೊಳ್ಳುತ್ತದೆ. ಇಂತಹ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸುವುದೂ ಸೂಕ್ತವಲ್ಲ. ಆದ್ದರಿಂದ, ಎಸ್ಐಟಿ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ನೀಡಿರುವ ಮಧ್ಯಂತರ ಆದೇಶಕ್ಕೆ ತಡೆ ನೀಡಬೇಕು ಎಂದು ಯುವತಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಹೈಕೋರ್ಟ್ 2022ರ ಫೆಬ್ರವರಿ 3ರಂದು ಸಿಡಿ ಪ್ರಕರಣದ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್ಐಟಿಗೆ ಅನುಮತಿ ನೀಡಿತ್ತು. ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತೆ ಯುವತಿ 2021ರ ಮಾರ್ಚ್ 26 ರಂದು ಕಬ್ಬನ್ ಪಾರ್ಕ್ ಪೆÇಲೀಸ್ ಠಾಣೆಗೆ ನೀಡಿರುವ ದೂರಿನ ಮೇರೆಗೆ ದಾಖಲಾರುವ ಪ್ರಕರಣದ ತನಿಖೆ ಈಗಾಗೇ ಮುಗಿದಿದೆ.

ತನಿಖಾ ವರದಿಯನ್ನು ಎಸ್‍ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಮೋದಿಸಿದ್ದಾರೆ. ವರದಿಯನ್ನು ಸಕ್ಷಮ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ಕೋರಿ ಎಸ್‍ಟಿಸಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸದಂತೆ ನಿಬರ್ಂಧಿಸಲು ನಮ್ಮ ಮುಂದೆ ಸೂಕ್ತ ಕಾರಣಗಳಿಲ್ಲ. ಆದ್ದರಿಂದ, ಎಸ್‍ಐಟಿ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬಹುದು ಎಂದು ಅನುಮತಿ ನೀಡಿ, ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು.

Tags:

error: Content is protected !!