DEATH

“ಹುಲಿಯ ಹುಟ್ಟಿತೋ ಕಿತ್ತೂರು ನಾಡಾಗ” ಹಾಡಿನ ಮಾಂತ್ರಿಕ ಬಸಲಿಂಗಯ್ಯ ಹಿರೇಮಠ ನಿಧನ

Share

ಹುಲಿಯ ಹುಟ್ಟಿತೋ ಕಿತ್ತೂರು ನಾಡಾಗ, ಭಂಟ ರಾಯಣ್ಣ ಸಂಗೊಳ್ಳಿ ಊರಾಗ ಈ ಹಾಡು ಕೇಳ್ತಿದ್ರೇನೆ ಮೈಯಲ್ಲಿ ಸ್ವಾತಂತ್ರ್ಯದ ಕಿಚ್ಚು ಸ್ವಾಭಿಮಾನದ ಹುಚ್ಚು ನಾಡಿನ ಬಗೆಗಿನ ಮೆಚ್ಚು ಎಲ್ಲವೂ ಮೈದಳೆಯುತ್ತೆ. ಇಂತಹ ಸ್ವಾಭಿಮಾನದ ಹಾಡು ಹಾಡಿದ್ದ ಗಾನ ಗಾರುಡಿಗ ಬಸಲಿಂಗಯ್ಯ ಹಿರೇಮಠ ಅವರು ನಿಧನರಾಗಿದ್ದಾರೆ.

ಹಿರಿಯ ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ(63) ಇಂದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಕಲಾವಿದ ಬಸಲಿಂಗಯ್ಯ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಜಾನಪದ ಕಲಾವಿದ ಬಸಲಿಂಗಯ್ಯ ಧಾರವಾಡದ ನಿವಾಸಿಯಾಗಿದ್ದರು. ಜಾನಪದ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು. ಇವರ ಪತ್ನಿ ವಿಶ್ವೇಶ್ವರಿ ಹಿರೇಮಠ ಕೂಡ ಜಾನಪದ ಕಲಾವಿದೆಯಾಗಿದ್ದು ಜಾನಪದ ಸಂಶೋಧನಾ ಸಂಸ್ಥೆ ಮೂಲಕ ಬಸಲಿಂಗಯ್ಯ ಹಿರೇಮಠ ದಂಪತಿ ಕಲಾ ಸೇವೆ ಮಾಡುತ್ತಿದ್ದರು. ಅಲ್ಲದೇ ಅನೇಕ ಜಾನಪದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಬಸಲಿಂಗಯ್ಯ ಹಿರೇಮಠ ಕೊನೆಯುಸಿರೆಳೆದಿದ್ದು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ಹೆಮ್ಮೆಯ ಪುತ್ರನಾಗಿ ಜನಿಸಿದ್ದ ಬಸಲಿಂಗಯ್ಯ ಹಿರೇಮಠ ಅವರು ಹುಟ್ಟು ಕಲಾವಿದರು. ಎಲ್ಲರ ಮನೆ ಮಾತಾಗಿರುವ ಹುಲಿಯ ಹುಟ್ಟಿತೋ ಕಿತ್ತೂರು ನಾಡಾಗ, ಭಂಟ ರಾಯಣ್ಣ ಸಂಗೊಳ್ಳಿ ಊರಾಗ ಹಾಗೂ ಗುಬ್ಬಿಯೊಂದು ಗೂಡು ಕಟ್ಯಾದೋ ಆ ಗೂಡಿನೊಳಗ ಜೀವ ಇಟ್ಟು ಎಲ್ಲಿಗ್ಹೋಗ್ಯದೋ ಎಂಬ ಹಾಡುಗಳನ್ನು ಅದ್ಭುತವಾಗಿ ಹಾಡಿದ್ದ ಮಾಂತ್ರಿಕ. ಇಂತಹ ಹಾಡುಗಳ ಮೂಲಕ ಜನಪ್ರಿಯರಾಗಿದ್ದ ಜಾನಪದ ಗೀತೆಗಳ ಗಾಯಕರಾದ ಬಸವಲಿಂಗಯ್ಯ ಹಿರೇಮಠ ಇನ್ನು ನೆನಪು ಮಾತ್ರ. ಇವರ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಗಲಿಕೆಯಿಂದ ಜಾನಪದ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ.

ಧಾರವಾಡ ಸೀಮೆಯಲ್ಲಿ ಸಂಗೊಳ್ಳಿ ರಾಯಣ್ಣನ ಲಾವಣಿ, ಕಲಬುರ್ಗಿ ಕಡೆ ಹೋದರೆ ಕಡಕೋಳ ಮಡಿವಾಳಪ್ಪನವರ ತತ್ವಪದ, ಹಾವೇರಿಯ ಕಡೆ ಕಾರ್ಯಕ್ರಮ ನಿಯೋಜನೆಯಾದರೆ ಶಿಶುನಾಳ ಷರೀಫರ ತತ್ವಪದ, ಬೆಂಗಳೂರು ಮೈಸೂರುಗಳಿಗೆ ಗಾಯನಕ್ಕೆ ಹೋದರೆ ಕುವೆಂಪು ಅವರ ಪದ್ಯಗಳನ್ನು ಅಚ್ಚುಕಟ್ಟಾಗಿ ಹಾಡುವ ಜಾಣ್ಮೆ ಅವರಲ್ಲಿತ್ತು. ಪತ್ತಾರ ಮಾಸ್ತರರ `ಸಂಗ್ಯಾ ಬಾಳ್ಯಾ’ ಪದ್ಯಕ್ಕೆ ರಂಗರೂಪ ನೀಡಿದ್ದ ಬಸಲಿಂಗಯ್ಯ ಹಿರೇಮಠ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ ಶರೀಫ್ ರಂಥ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

Tags:

error: Content is protected !!