Vijaypura

*ವಿಶ್ವ ವಿಖ್ಯಾತ ಗೋಳಗುಮ್ಮಟ ವಿಕ್ಷಣೆಗೆ ಆಗಮಿಸುತ್ತಿರುವ ಜನತೆ*

Share

ಕೋವಿಡ್ ನಿಂದಾಗಿ ಇಂದು ಐತಿಹಾಸಿಕ ಪ್ರವಾಸಿ ತಾಣಗಳು ಮಂಕಾಗುತ್ತಿವೆ, ಪ್ರವಾಸಿ ತಾಣಗಳತ್ತ ಜನ ಮುಖ ಮಾಡುತ್ತಿಲ್ಲ. ಇನ್ನೂ ವಿಶ್ವ ವಿಖ್ಯಾತ ಗೋಳಗುಮ್ಮಟ ವಿಕ್ಷಣೆಗೆ ಜನ ಆಗಮಿಸದ ಹಿನ್ನಲೆಯಲ್ಲಿ ಅಟೋ ಟಾಂಗಾ, ಚಾಲಕರು, ಪಾರ್ಕಿಂಗ್ ಟೆಂಡರ್ ಪಡೆದವರು ಸಹಿತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ವಿಜಯಪುರ ಜಿಲ್ಲೆ ಹಲವು ಪ್ರವಾಸಿ ತಾಣಗಳನ್ನು ಹೊಂದಿದೆ, ಅದರಲ್ಲೂ ಪ್ರಮುಖವಾಗಿ ವಿಶ್ವ ವಿಖ್ಯಾತ ಗೋಳಗುಮ್ಮಣ, ಇಬ್ರಾಹಿಂ ರೋಜಾ, ಮುಲ್ಕ ಮೈದಾನ ತೋಫದಂತಹ ಹಲವು ಪ್ರವಾಸಿ ತಾಣಗಳನ್ನು ವಿಕ್ಷಣೆ ಮಾಡಲು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಮೊದಲು ಪ್ರವಾಸಿಗರು ಆಗಮಿಸುತ್ತಿದ್ದರು, ಆದರೆ ಕೋವಿಡ್ ಬಂದಾಂಗಿ‌ನಿಂದಲೂ ಸಹಿತ ಪ್ರವಾಸಿ ತಾಣಗಳಿಗೆ ಗ್ರಹಣ ಬಡಿದಂತಾಗಿದೆ. ಇತ್ತು ಪ್ರವಾಸಿ ತಾಣದತ್ತ ಜನ ಕೂಡಾ ಸುಳಿಯುತ್ತಿಲ್ಲ. ಪ್ರವಾಸಿಗರನ್ನೆ ನಂಬಿ ಬದುಕು ಸಾಗಿಸುವ ಅಟೋ ಚಾಲಕರು, ಟಾಂಗಾದವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೋವಿಡ್ ಆರಂಭವಾದಾಗಿನಿಂದಲೂ ಸಹಿತ ಪ್ರವಾಸಿಗರ ಸಂಖ್ಯೆ ಇಳಿಮುಖ ಕಂಡಿದೆ. ಅದರಲ್ಲೂ ಈಗ ಸರ್ಕಾರ ನೈಟ್ ಕರ್ಪ್ಯೂ ವಿಧಿಸಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಇಳಿಮುಖವಾಗುವಂತೆ ಮಾಡಿದೆ…

ಇಳಿಮುಖ ಕಂಡಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಇಂದು ಮತ್ತಷ್ಟು ಹೆಚ್ಚಳ ಕಂಡಿದೆ. ಮೊದಲೆಲ್ಲ ದಿನಕ್ಕೆ 3ನೂರು 4 ನೂರು ಜನ ಬರುತ್ತಿದ್ದ ಪ್ರವಾಸಿಗರು ಇಂದು 2 ಸಾವಿರದ ವರೆಗೆ ತಲುಪಿದೆ‌ ಇದಕ್ಕೆ ಪ್ರಮುಖ ಕಾರಣ ಹೊಸ ವರ್ಷ ಹಾಗೂ ವಿಕೇಂಡ್ ಇರುವ ಹಿನ್ನಲೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ…

ಒಂದೆಡೆ ಕೋವಿಡ್ ಹಾಗೂ ಒಮಿಕ್ರಾನ್ ಆತಂಕದ ಹಿನ್‌ಲೆಯಲ್ಲಿ‌ಸರ್ಕಾರ ಕಟ್ಟು ನಿಟ್ಟಿನ ನಿಯಮ‌ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವಂತೆ ಮಾಡಿದೆ. ಡಿ 25 ರಿಂದ ಜನವರಿ 15 ರ ವರೆಗೆ ಪ್ರತಿ ವರ್ಷ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದರು ಆದರೆ ಈ ಬಾರಿ ಭಾರೀ ಇಳಿಮುಖ ಕಂಡಿದೆ. ಇನ್ನೂ ಮುಂದೆ ಮತ್ತೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗತ್ತಾ ಎಂಬುದನ್ನು ಕಾದು ನೋಡಬೇಕಿದೆ…

Tags:

error: Content is protected !!