COVID-19

*ಧೂಳುಮುಕ್ತ ವಿಜಯಪುರಕ್ಕೆ ಕಂಕಣ ತೊಟ್ಟ ಪಾಲಿಕೆ ಅಧಿಕಾರಿಗಳು

Share

ಕೊರೊನಾ ಓಮಿಕ್ರಾನ್ ಹಾವಳಿ ತಡೆಗಟ್ಟಲು ರಾಜ್ಯದಲ್ಲಿ ಸರಕಾರ ವೀಕೆಂಡ್ ಕರ್ಫ್ಯೂ ಆದೇಶಿಸಿದೆ. ಈ ವೀಕೆಂಡ್ ಕರ್ಫ್ಯೂ ನ್ನು ಸದುಪಯೋಗ ಪಡಿಸಿಕೊಂಡು ಮಹಾನಗರ ಪಾಲಿಕೆಯು ಐತಿಹಾಸಿಕ ನಗರದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡು ಸ್ವಚ್ಚ ವಿಜಯಪುರ ಧೂಳುಮುಕ್ತ ವಿಜಯಪುರ ಮಾಡುವತ್ತ ಹೆಜ್ಜೆ ಇಟ್ಟಿದೆ.

ಕಳೆದ ಎರಡು ದಿನಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪೌರ ಕಾರ್ಮಿಕರು ರೋಡ್ ಸ್ವೀಪ್ ಬ್ರಷ್ ಹಾಗೂ ಕಸಬರಗಿ ಜೊತೆ ಧೂಳು ತೆಗೆಯುವುದರಲ್ಲಿ ಮಗ್ನರಾಗಿದ್ದಾರೆ. ಮಹಾನಗರ ಪಾಲಿಕೆಯ ಒಟ್ಟು 600 ಪೌರ ಕಾರ್ಮಿಕರು ಅವರಲ್ಲಿ 450 ಜನ ಮಹಿಳೆಯರು, 150 ಪುರುಷರು, 18 ಟ್ರ್ಯಾಕ್ಟರ್, 1 ಜೆಸಿಬಿ ಯ ಮೂಲಕ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಸ್ಟೇಶನ್ ರಸ್ತೆ, ಗಾಂಧಿ ರಸ್ತೆ, ಸಿದ್ದೇಶ್ವರ ರಸ್ತೆ ಹೀಗೆ ಪ್ರಮುಖ ರಸ್ತೆಗಳಲ್ಲಿ ಮಹಾನಗರ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ಆಜಾಧ ಹಂಚಿನಾಳ,ಸರ್ವಿಸ್ ಎಕ್ಸಪರ್ಟ್ ಶಶಿಧರ ಕಲ್ಮಠ ಖುದ್ದು ರಸ್ತೆಗಿಳಿದಯ ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ. ಇನ್ನೂ ಮಹಾನಗರ ಪಾಲಿಕೆ ಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

 

Tags:

error: Content is protected !!