ಧಾರವಾಡ : ಕೋವಿಡ್ ರೂಪಾಂತರಿ ವೈರಸ್ ಬಗ್ಗೆ ಜಿಲ್ಲೆಯ ಜನತೆ ಭಯಪಡಬೇಕಿಲ್ಲ ಆರೋಗ್ಯ ಸಚಿವರೂ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದ್ದಾರೆ

ಆರೋಗ್ಯ ಸಚಿವರೂ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡಲು ಹೇಳಿದ್ದಾರೆ. ಬಿಪಿ ಮತ್ತು ಇತರೆ ಕಾಯಿಲೆಗಳಿದ್ದವರ ಬಗ್ಗೆ ನಿಗಾ ವಹಿಸಲು ತಿಳಿಸಿದ್ದಾರೆ. ಕೋವಿಡ್ ಬಂದು ಈಗ ನಾಲ್ಕು ವರ್ಷ ಆಗಿದೆ ಇದು ಹೊಸದೇನಲ್ಲ. ಇದನ್ನು ಹೇಗೆ ಎದುರಿಸಬೇಕು ಎಲ್ಲರಿಗೂ ಗೊತ್ತಿದೆ. ಜೊತೆಗೆ ಮುಂಜಾಗ್ರತೆ ಏನು ವಹಿಸಬೇಕು ಎಲ್ಲರಿಗೂ ತಿಳಿದಿದೆ. ಕೈ ತೊಳೆಯುವುದು, ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಯಬೇಕು. ಕೆಮ್ಮು, ಜ್ವರ ಇದ್ದವರೂ ತಪಾಸಣೆ ಮಾಡಿಸಿಕೊಳ್ಳಬೇಕು. ಯಾರೂ ನಿರ್ಲಕ್ಷ್ಯ ಮಾಡದೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ಕೋವಿಡ್ ಟೆಸ್ಟಿಂಗ್ ಗೆ ಎಲ್ಲ ಸೌಲಭ್ಯ ಜಿಲ್ಲೆಯಲ್ಲಿದೆ. 5000ಕ್ಕೂ ಹೆಚ್ಚು ಬೆಡ್ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಲಭ್ಯ ಇವೆ. 1500ಕ್ಕೂ ಹೆಚ್ಚು ಬೆಡ್ ಆಕ್ಸಿಜನ್ ಸಹಿತ ಇವೆ. 500ಕ್ಕೂ ಹೆಚ್ಚು ಐಸಿಯು ಬೆಡ್ ಇವೆ. ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಹಿತ ಬೆಡ್ ಸಿದ್ಧವಾಗಿವೆ. ಜನರು ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲೋ ಮಾಡಬೇಕು ಎಂದು ಹೇಳಿದರು.