Belagavi

3 ಸಾವಿರ ರೂ. ಡಿಸೇಲ್ ಹಾಕಿಸಿಕೊಳ್ಳುವಷ್ಟು ಜಿಪುಣ ನಾನಲ್ಲ..ಡಿಸಿಎಂ ಲಕ್ಷ್ಮಣ ಸವದಿ

Share

ಮೂರು ಸಾವಿರ ರೂಪಾಯಿ ಡೀಸೆಲ್ ಹಾಕಿಸಿಕೊಳ್ಳೋ ದುರ್ಗತಿ ನನಗೆ ಬಂದಿಲ್ಲ. ಮೊದಲಿನಿಂದಲೂ ಭಗವಂತ ನಮ್ಮ ಮನೆತನವನ್ನು ಉತ್ತಮ ಸ್ಥಿತಿಯಲ್ಲಿಟ್ಟಿದ್ದಾನೆ. ಮೂರು ಸಾವಿರ ರೂಪಾಯಿಗಾಗಿ ಜಿಪುಣತನ, ಕೀಳುತನ ಜೀವನದಲ್ಲಿಯೇ ಮಾಡಿಲ್ಲ. ಯಾರೋ ಆಗದವರು ಇಂತಹದ್ದನ್ನು ದೊಡ್ಡ ಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು ಶುಕ್ರವಾರ ಬೆಳಗಾವಿಯ ಕೆಎಸ್‍ಆರ್‍ಟಿಯ 3ನೇ ಘಟಕದಲ್ಲಿ ಪುರುಷ, ಮಹಿಳೆಯರ ವಿಶ್ರಾಂತಿ ಗೃಹ ಉದ್ಘಾಟಿಸಲು ಆಗಮಿಸಿದ್ದ ವೇಳೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಖಾಸಗಿ ಕಾರಿಗೆ ಖಾಸಗಿ ಚಾಲಕ ಡಿಪೋದಲ್ಲಿಯೇ ಡಿಸೇಲ್ ಹಾಕಿಸಿದ್ದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಅಥಣಿಯಲ್ಲಿ ಸ್ಪಷ್ಟನೆ ನೀಡಿರುವ ಲಕ್ಷ್ಮಣ ಸವದಿ ಯಾವು ಗಿಡದಲ್ಲಿ ಹಣ್ಣು ಇರುತ್ತೋ ಆ ಮರಕ್ಕೆ ಎಲ್ಲರೂ ಕಲ್ಲು ಒಗೆಯುತ್ತಾರೆ. ಬೆಳಗಾವಿಯ ಡಿಪೆÇೀದಲ್ಲಿ ಪುರುಷ, ಮಹಿಳೆಯರ ವಿಶ್ರಾಂತಿ ಗೃಹ ಉದ್ಘಾಟಿಸಲು ಹೋಗಿದ್ದೆ ಖಾಸಗಿ ವಾಹನ, ಚಾಲಕನೂ ಸಹ ಖಾಸಗಿಯವನು.

ಕಾರು ಚಾಲಕ ಪೆಟ್ರೋಲ್ ಬಂಕ್ ಎಲ್ಲಿ ಸಮೀಪ ಇದೆ ಅಂತಾ ಸಿಬ್ಬಂದಿಗೆ ಕೇಳಿದ್ದಾನೆ. ಆಗ ಡಿಪೆÇೀ ಸಿಬ್ಬಂದಿ ಹೊರಗೆ ಯಾಕೇ ಹೋಗ್ತೀರಿ ಇಲ್ಲೇ ಇದೆ ಎಂದಿದ್ದಾರೆ. ಆಗ ಚಾಲಕನಿಗೆ ಅರಿವಿಲ್ಲದೇ ಡಿಪೆÇೀದಲ್ಲಿ ಡೀಸೆಲ್ ಹಾಕಿಸಿಕೊಂಡಿದ್ದಾನೆ. ನನ್ನ ಗಮನಕ್ಕೆ ಬಂದ ತಕ್ಷಣ ಡಿಸಿಯವರ ಗಮನಕ್ಕೆ ತಂದಿದ್ದೇನೆ ಲೋಪದೋಷವಾಗಿದ್ದು ಆ ಬಂಕ್ ಮ್ಯಾನೇಜರ್ ಹೇಳಬೇಕಾಗಿತ್ತು. ಖಾಸಗಿ ವಾಹನಗಳಿಗೆ ಡೀಸೆಲ್ ಹಾಕಲು ಬರಲ್ಲ ಅಂತಾ ಹೇಳಬೇಕಾಗಿತ್ತು. ನನ್ನ ಖಾಸಗಿ ಕಾರು ಚಾಲಕನಿಗೂ ಇದರ ಬಗ್ಗೆ ಅರಿವಿಲ್ಲ. ಅಚಾತುರ್ಯದಿಂದ ಈ ಘಟನೆ ಆಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ನನ್ನ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. 3 ಸಾವಿರ ರೂಪಾಯಿ ಡಿಸೇಲ್ ಹಾಕಿಸಿಕೊಳ್ಳುವ ದುರ್ಗತಿಯೂ ನನಗೆ ಬಂದಿಲ್ಲ ಎಂದು ಖಾರವಾಗಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!