ಬೆಳಗಾವಿ-ನಾಸಿಕ್ ನಡುವೆ ಸ್ಟಾರ್ ಏರ್ ಕಂಪನಿಯ ವಿಮಾನ ಸಂಚಾರ ಜನವರಿ 25ರಿಂದ ಆರಂಭವಾಗಲಿದೆ. ವಾರಕ್ಕೆ ಮೂರು ದಿನ ಈ ವಿಮಾನ ಸಂಚಾರ ಇರಲಿದ್ದು, ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
: ಬೆಳಗಾವಿ-ನಾಸಿಕ್ ನಡುವೆ ಸ್ಟಾರ್ ಏರ್ ಕಂಪನಿಯ ವಿಮಾನ ಪ್ರತಿ ಭಾನುವಾರ, ಸೋಮವಾರ ಹಾಗೂ ಶುಕ್ರವಾರ ಸಂಪರ್ಕಿಸಲಿದೆ. ಸೋಮವಾರ ಹಾಗೂ ಶುಕ್ರವಾರ ಬೆಳಗಾವಿಯಿಂದ ಸಂಜೆ 4.40ಕ್ಕೆ ಹೊರಟು 5.40ಕ್ಕೆ ನಾಸಿಕ್ ತಲುಪಲಿದೆ.
ಅಲ್ಲಿಂದ ಸಂಜೆ 6.15ಕ್ಕೆ ಹೊರಟು 7.15ಕ್ಕೆ ಬಂದು ಸೇರಲಿದೆ. ಭಾನುವಾರ ಬೆಳಿಗ್ಗೆ 9.15ಕ್ಕೆ ನಿರ್ಗಮಿಸಿ, 10.15ಕ್ಕೆ ನಾಸಿಕ್ ಸೇರಲಿದೆ. ಅಲ್ಲಿಂದ ಬೆಳಿಗ್ಗೆ 10.45ಕ್ಕೆ ಹೊರಟು, 11.45ಕ್ಕೆ ಬೆಳಗಾವಿ ಸಾಂಬ್ರಾ ನಿಲ್ದಾಣಕ್ಕೆ ಬಂದಿಳಿಯಲಿದೆ.