Belagavi

ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ, ಗುಣಮಟ್ಟ: ಸಚಿವರ ಎದುರೇ ಮಾಜಿ ಮೇಯರ್ ಸಾತೇರಿ, ಶಾಸಕ ಅಭಯ ಪಾಟೀಲ ವಾಗ್ವಾದ

Share

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ವಿಳಂಬ ಗತಿ ಮತ್ತು ಹಲವೆಡೆ ಕೈಗೊಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮಾಜಿ ನಗರಸೇವಕರ ಸಂಘಟನೆ ವತಿಯಿಂದ ಮಾಜಿ ಮೇಯರ್ ನಾಗೇಶ ಸಾತೇರಿ ಅಸಮಾಧಾನ ವ್ಯಕ್ತಪಡಿಸಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರಿಗೆ ದೂರು ಸಲ್ಲಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರನ್ನು ಭೇಟಿ ಮಾಡಿದ ಮಾಜಿ ನಗರಸೇವಕರ ಸಂಘಟನೆ ಮುಖಂಡ ಮಾಜಿ ಮೇಯರ್ ನಾಗೇಶ ಸಾತೇರಿ ಮತ್ತು ಸಂಗಡಿಗರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ವಿಳಂಬ ಗತಿ ಮತ್ತು ಹಲವೆಡೆ ಕೈಗೊಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಮಧ್ಯ ಪ್ರವೇಶಿಸಿದ ಶಾಸಕ ಅಭಯ ಪಾಟೀಲ, ಸಚಿವರಿಗೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸಬಾರದು. ದೂರುಗಳಿದ್ದರೆ ಶಾಸಕನಾದ ನನ್ನೊಂದಿಗೆ ಚರ್ಚಿಸಿ ನಂತರ ದೂರು ನೀಡಿ ಎಂದು ಹೇಳಿದರು. ಮಾಜಿ ಮೇಯರ್ ನಾಗೇಶ ಸಾತೇರಿ ಮತ್ತು ಶಾಸಕ ಅಭಯ ಪಾಟೀಲ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ಶುರುವಾಯಿತು. ಈ ನಡುವೆ ಮಾಜಿ ಮೇಯರ್ ನಾಗೇಶ ಸಾತೇರಿ ಅದನ್ನು ಕೇಳಲು ನೀವು ಯಾರು ಎಂದು ಕೇಳಿದ್ದು ಶಾಸಕರನ್ನು ಕೆರಳಿಸಿತು. ಕೂಡಲೇ ಶಾಸಕ ಅಭಯ ಪಾಟೀಲ ಎದ್ದು ನಿಂತು ವಾದ ಮಾಡಲಾರಂಭಿಸಿದರು. ಸಚಿವ ಭೈರತಿ ಬಸವರಾಜ ಅವರ ಅಂಗಿ ಹಿಡಿದು ಎಳೆದು ಕುಳಿತುಕೊಳ್ಳಲು ಸೂಚಿಸಿದರು.

ಈ ವೇಳೆ ಶಾಸಕ ಅನಿಲ ಬೆನಕೆ, ಕೆಯುಡಬ್ಲ್ಯುಸಿ ನಿರ್ದೇಶಕಿ ದೀಪಾ ಕುಡಚಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

 

Tags:

error: Content is protected !!