Belagavi

ಸಾರಿಗೆ ಸಚಿವ ಸವದಿ ಕಾರಿಗೆ ಡಿಸೇಲ್ ಹಾಕಿದ್ದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ

Share

ಸಾರಿಗೆ ಸಚಿವ, ಡಿಸಿಎಂ ಸವದಿ ಖಾಸಗಿ ಕಾರಿಗೆ ಕೆಎಸ್‍ಆರ್‍ಟಿಸಿ ಡಿಪೆÇೀದಲ್ಲಿ ಡೀಸೆಲ್ ಹಾಕಿದ ಘಟನೆಗೆ ಸಂಬಂಧಿಸಿದಂತೆ ಡೀಸೆಲ್ ಹಾಕಿದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಬೆಳಗಾವಿ ವಿಭಾಗದ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಆದೇಶ ಹೊರಡಿಸಿದ್ದಾರೆ.

ಶನಿವಾರ ಈ ಸಂಬಂಧ ಮಾಹಿತಿ ನೀಡಿರುವ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಸಾರಿಗೆ ಸಚಿವರ ವಾಹನ ಪರಿಶೀಲಿಸದೇ ಡೀಸೆಲ್ ಹಾಕಿದ್ದಕ್ಕೆ ಡೀಸೆಲ್ ಹಾಕಿದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು. ಸಿಬ್ಬಂದಿಯ ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದು ಹೇಳಿದರು.
ಶುಕ್ರವಾರ ಮೂರನೇ ಘಟಕದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಡಿಸಿಎಂ ಲಕ್ಷ್ಮಣ್ ಸವದಿ ಆಗಮಿಸಿದ್ದರು.

ಈ ವೇಳೆ ಅವರ ಕಾರು ಚಾಲಕ ಬಂದು ಡೀಸೆಲ್ ಹಾಕಿಸಲು ಬಂದಿದ್ದಾನೆ. ಕಾರಿನ ನಂಬರ್ ಕೆಎ 03 ಎನ್‍ಎಫ್ 8989 ವಾಹನಕ್ಕೆ ಡೀಸೆಲ್ ಹಾಕಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಎಫ್ ಸೀರಿಸ್ ವಾಹನ ಸಾರಿಗೆ ಇಲಾಖೆ ವಾಹನಗಳಿರುತ್ತವೆ. ಎಫ್ ಸೀರಿಸ್ ಇರಬಹುದು ಅಂತಾ ನಮ್ಮ ಸಿಬ್ಬಂದಿ ಡೀಸೆಲ್ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಾರಿಗೆ ಸಚಿವರು ಸಹ ತಮ್ಮ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬಹುದು. ಡಿಸಿಎಂ ಲಕ್ಷ್ಮಣ್ ಸವದಿಯವರ ಖಾಸಗಿ ಕಾರಿಗೆ ಒಟ್ಟು 44 ಲೀಟರ್ ಡೀಸೆಲ್ ಹಾಕಲಾಗಿತ್ತು. ಇದರ ಮೊತ್ತ 3542 ರೂಪಾಯಿ ಆಗಿದ್ದು ಡಿಸಿಎಂ ಲಕ್ಷ್ಮಣ್ ಸವದಿ ಅವರ ಸಿಬ್ಬಂದಿ ಆ ಹಣವನ್ನು ಪಾವತಿಸಿದ್ದಾರೆ ಎಂದು ಮಹಾದೇವಪ್ಪ ಮುಂಜಿ ಹೇಳಿದರು.
ಒಟ್ಟಾರೆ ಡಿಸಿಎಂ ಸವದಿ ಕಾರಿಗೆ ಡಿಸೇಲ್ ಹಾಕಿದ ಪ್ರಕರಣ ಇಡೀ ರಾಜ್ಯದಲ್ಲಿಯೇ ತೀವ್ರ ಚರ್ಚೆಯಾಗಿತ್ತು. ಇದೀಗ ಡಿಸೇಲ್ ಹಾಕಿದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

 

Tags:

error: Content is protected !!