Belagavi

ಸಂಜೆಯೊಳಗೆ ಕೋವಿಡ್ ನಿಯಮ ರದ್ಧು ಮಾಡಿ..ಇಲ್ಲ ಅಮಿತ್ ಷಾ ಕಾರ್ಯಕ್ರಮ ರದ್ಧು ಮಾಡಿ..ಭೀಮಪ್ಪ ಗಡಾದ್

Share

ಇಂದು ಸಂಜೆಯೊಳಗೆ ಕೋವಿಡ್ ನಿಯಮ ರದ್ಧು ಮಾಡಬೇಕು. ಇಲ್ಲವೇ ಕೇಂದ್ರ ಸಚಿವ ಅಮಿತ್ ಷಾ ಕಾರ್ಯಕ್ರಮ ರದ್ಧು ಪಡಿಸಬೇಕು. ಇಷ್ಟು ಮೀರಿ ಜನಸೇವಕ ಕಾರ್ಯಕ್ರಮದಲ್ಲಿ ಭಾಗಿಯಾದ್ರೆ ಅಮಿತ್ ಷಾಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಎಚ್ಚರಿಕೆ ನೀಡಿದ್ದಾರೆ.

ಹೌದು ಜ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದಾರೆ. ಸಧ್ಯ ಕೋವಿಡ್ ಸಂಕಷ್ಟದಲ್ಲಿ ಅಮಿತ್ ಷಾ ಕಾರ್ಯಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ನೇತೃತ್ವದಲ್ಲಿ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು. ಈ ವೇಳೆ ಕೋವಿಡ್ ನಿಯಮ ರದ್ಧು ಪಡಿಸಿ ಇಲ್ಲವೇ..ಅಮಿತ್ ಷಾ ಕಾರ್ಯಕ್ರಮ ರದ್ಧು ಪಡಿಸಿ..ಜನಸಾಮಾನ್ಯರಿಗೊಂದು ಕಾನೂನು ರಾಜಕಾರಣಿಗಳೊಂದು ಕಾನೂನು..ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಇದೇ ವೇಳೆ ಮಾತನಾಡಿದ ಭೀಮಪ್ಪ ಗಡಾದ ರವಿವಾರ ಬಿಜೆಪಿಯವರು ಜನಸೇವಕ ಸಮಾವೇಶ ನಡೆಸುತ್ತಿದ್ದಾರೆ. ಸಾಮಾನ್ಯ ಜನರು ಬೀದಿಗಿಳಿದ್ರೆ 200 ರೂಪಾಯಿ ದಂಡವನ್ನು ಪೊಲೀಸರು ವಿಧಿಸುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಮಂತ್ರಿಗಳು ಯಾವುದೇ ರೀತಿ ಮಾಸ್ಕ್ ಹಾಕಿಕೊಳ್ಳದೇ ಓಡಾಡುತ್ತಿದ್ದಾರೆ. ಅವರ್ಯಾರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರು. ಸಾಮಾಜಿಕ ಅಂತರ ಪಾಲಿಸಿಕೊಂಡು ಕಾರ್ಯಕ್ರಮ ಮಾಡುವಂತೆ ಸರ್ಕಾರದ ಸುತ್ತೋಲೆಯಿದೆ. ಇವರು 3 ಲಕ್ಷ ಜನರನ್ನು ಸೇರಿಸುತ್ತೇವೆ ಎನ್ನುತ್ತಿದ್ದಾರೆ. ಹೀಗೆ ಸಾಮಾಜಿಕ ಅಂತರ ಪಾಲಿಸಿದ್ರೆ ಜನ ಹುಬ್ಬಳ್ಳಿ ಧಾರವಾಡವರೆಗೂ ನಿಲ್ಲಬೇಕಾಗುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ಭೀಮಪ್ಪ ಗಡಾದ್ ಬಿಜೆಪಿಯವರು ಅನಧಿಕೃವಾಗಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಕೇಂದ್ರ ಗೃಹ ಸಚಿವರಿಗೆ ಬುದ್ಧಿಯಿದೆ ಎಂದು ತಿಳಿದುಕೊಂಡಿದ್ದೆ. ಆದ್ರೆ ಅವರಿಗೂ ಬುದ್ಧಿ ಸ್ವಲ್ಪ ಕಡಿಮೆಯಿದೆ ಎಂದು ನನಗೆ ಅನಿಸುತ್ತಿದೆ. ಜವಾಬ್ದಾರಿಯುತ ಮಂತ್ರಿಯಾಗಿ ಕೋವಿಡ್ ನಿಯಮವನ್ನು ಅಮಿತ್ ಷಾ ಪಾಲಿಸಬೇಕು. ಆದರೆ ಅವರಿಗೆ ಇಲ್ಲಿನ ಬಿಜೆಪಿ ನಾಯಕರು ಏನು ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ. ಪೊಲೀಸ್ ಇಲಾಖೆ ಕೇಳಿದ್ರೆ ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ ಪೊಲೀಸರು ಅನುಮತಿ ಕೊಟ್ಟಿದ್ದಾರೆ ಎಂದು ಒಬ್ಬರ ಕಡೆ ಒಬ್ಬರು ಬೆರಳು ತೋರಿಸುತ್ತಿದ್ದಾರೆ. ಇಷ್ಟು ಮಿರಿ ಕಾರ್ಯಕ್ರಮದಲ್ಲಿ ಭಾಗಿಯಾದರೇ ಅವರು ಎಷ್ಟೇ ದೊಡ್ಡವರಿದ್ದರೂ ಅವರ ವಿರುದ್ಧ ಕಾನೂನು ಹೋರಾಟದ ಮೂಲಕ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

ಒಟ್ಟಾರೆ ಜನಸಾಮಾನ್ಯರು ಕೋವಿಡ್ ನಿಯಮ ಪಾಲಿಸಿದ್ರೆ ದಂಡ ವಿಧಿಸುವ ಸರ್ಕಾರ ಮತ್ತು ಪೊಲೀಸರು ಬಿಜೆಪಿಯವರು ಲಕ್ಷಾಂತರ ಜನರನ್ನು ಸೇರಿಸಿ ಜನಸೇವಕ ಸಮಾವೇಶ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರತಿಭಟನೆಯಲ್ಲಿ ಹಲವರು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್‍ಗೆ ಸಾಥ್ ನೀಡಿದರು.

Tags:

error: Content is protected !!