ಸಧ್ಯ ತನಿಖೆ ಎದುರಿಸುತ್ತಿರುವ ವಂಚಕ ಯುವರಾಜ್ ಸ್ವಾಮಿ ನನಗೂ ಒಂದೆರಡು ಬಾರಿ ದೆಹಲಿಯಲ್ಲಿ ಭೇಟಿಯಾಗಿದ್ದೇನೆ ಆದ್ರೆ ನಾನು ಅವನ ಜೊತೆ ಫೋಟೋ ತೆಗೆಸಿಕೊಂಡಿಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೂತನ ಗ್ರಾಮ ಪಂಚಾಯತಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಭಾಗಿಯಾದ ನಂತರ ಮಾಧ್ಯಮಗಳ ಜೊತೆ ಈ ಸಂಬಂಧ ಮಾತನಾಡಿದ ರಮೇಶ ಜಾರಕಿಹೊಳಿ ನನಗೂ ಒಂದೆರಡು ಬಾರಿ ದೆಹಲಿಯಲ್ಲಿ ಭೇಟಿಯಾಗಿದ್ದೆ. ಆದರೆ ಫೋಟೋ ತೆಗೆಸಿಕೊಂಡಿರಲಿಲ್ಲ. ದೆಹಲಿಯಲ್ಲಿ ನನ್ನ ಜೊತೆ ಟೀ ಕುಡಿದಿದ್ದಾನೆ. ಇನ್ನು ಫೋಟೋ ತೆಗೆಸಿಕೊಂಡರೆ ತಪ್ಪಿತಸ್ಥರಂತೆ ಬಿಂಬಿಸಬೇಡಿ. ಉನ್ನತ ಸ್ಥಾನದಲ್ಲಿದ್ದಾಗ ಫೋಟೋ ತೆಗೆಸಿಕೊಳ್ಳಲು ಬರುವುದು ಸಹಜ ಎಂದರು.
: ಸುಳೇಭಾವಿ ಭಾಗದಲ್ಲಿ ಮತ್ತೊಂದು ಕಾರ್ಯಕ್ರಮ ಮಾಡುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ ನೀರಾವರಿ ಇಲಾಖೆ ರಾಜ್ಯ ಮಟ್ಟದ ಪ್ರವಾಸವಿದೆ. ಜ.17ರ ನಂತರ ಜ.20, 21ರಂದು ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಲಿದ್ದೇನೆ. ಇದಾದ ನಂತರ ಕಾರ್ಯಕ್ರಮ ಮಾಡುತ್ತೇನೆ ಎಂದು ಹೇಳಿದರು.
: ಬಿಜೆಪಿ ಅವರಿಗೆ ಸುಳ್ಳು ಹೇಳುವ ಸಂಸ್ಕøತಿ ಇದೆ. ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪದ ಕುರಿತು ಮಾಧ್ಯಮಗಳು ಕೇಳುತ್ತಿದ್ದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ಜಾರಿಕೊಂಡರು.
ಒಟ್ಟಾರೆ ಯುವರಾಜ್ ಸ್ವಾಮಿ ಭೇಟಿ ಸಂಬಂಧ ಸೇರಿ ಹಲವು ವಿಚಾರಗಳ ಕುರಿತು ಮಾಧ್ಯಮಗಳ ಜೊತೆ ರಮೇಶ ಜಾರಕಿಹೊಳಿ ಮಾತನಾಡಿದ್ದಾರೆ.