ಬೆಳಗಾವಿ ಮರಾಠಾ ಸಮಾಜಕ್ಕೆ 50 ಕೋಟಿ ರೂ. ಮಂಜೂರು ಮಾಡಿದೆ. ಬೆಳಗಾವಿ ಗ್ರಾಮೀಣಕ್ಕೆ 5 ಕೋಟಿ ನೀಡಬೇಕೆಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.
ಬೆಳಗಾವಿ ತಾಲೂಕು ಕಿಣಯೇ ಗ್ರಾಮದಲ್ಲಿ ಸೋಮವಾರ ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಬಾರಿ ಮರಾಠಾ ಸಮಾಜಕ್ಕೆ 50 ಕೋಟಿ ರೂ. ಮಂಜೂರು ಮಾಡಿದ್ದಾರೆ. ಇದರಿಂದ ಮರಾಠಾ ಸಮಾಜಕ್ಕೆ ಅನುಕೂಲವಾಗುತ್ತದೆ.
ಇದರಲ್ಲಿ 5 ಕೋಟಿ ರೂ. ಗ್ರಾಮೀಣ ಕ್ಷೇತ್ರಕ್ಕೆ ಕೊಡಬೇಕು. ಸಾಕಷ್ಟು ಬಡವರು ಗ್ರಾಮೀಣದಲ್ಲಿದ್ದು, ಅವರಿಗೆ ಅನುಕೂಲವಾಗುತ್ತದೆ. ರಾಜಹಂಸಗಡದಲ್ಲಿ ಶಿವಾಜಿ ಪುತ್ಥಳಿ ಸಿದ್ಧವಾಗುತ್ತಿದ್ದು, ಈಗಾಗಲೇ ಶೇ.80ರಷ್ಟು ಕಾಮಗಾರಿ ಮುಗಿದಿದೆ. ಶೀಘ್ರದಲ್ಲಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕರೆಸಿ ಉದ್ಘಾಟನೆ ನೆರವೇರಿಸೋಣ ಎಂದರು.