Belagavi

ಮನ್ಮುಕ ಹಾವು ಮಾರಾಟ ಮಾಡ್ತಿದ್ದ ಖದೀಮರು ಅಂದರ್

Share

ಎರಡು ಜೀವಂತ ಮನ್ಮುಕ ಹಾವುಗಳನ್ನು ಮಹಾರಾಷ್ಟ್ರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಳಗಾವಿಯ ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಶಕ್ಕೆ ಪಡೆದೊಕೊಂಡಿದ್ದಾರೆ. ಈ ವೇಳೆ ಮೂರು ಆರೋಪಿಗಳನ್ನು ಪರಾರಿಯಾಗಿದ್ದಾರೆ.

: ಹೌದು ಅಥಣಿ ತಾಲೂಕಿನ ತೇಲಸಂಗ ಕ್ರಾಸ್ ಬಳಿ ಎರಡು ಮನ್ಮುಕ ಹಾವು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅರಣ್ಯ ಸಂಚಾರಿ ದಳದ ಪಿಎಸ್‍ಐ ರೋಹಿಣಿ ಪಾಟೀಲ್ ನೇತೃತ್ವದ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ವಿಜಯಪುರದ ಜೋರಾಪುರ ವಾಟರ್ ಟ್ಯಾಂಕ್ ಬಳಿಯ ಅಕ್ಷಯ ಗುರು ಕೋಟ್ಯಾಳ, ಸಿಂಧಗಿಯ ವಿದ್ಯಾನಗರದ ಅಕ್ಷಯ ಗುರಪ್ಪ ಲಾಳಸಂಗಿ, ವಿಜಯಪುರ ಆದರ್ಶ ನಗರದ ಕೆಎಚ್‍ಪಿ ಕಾಲನಿಯ ದುಂಡಪ್ಪ ಅಯ್ಯಪ್ಪ ಬಾಗಾಯತ ಎಂದು ಗುರುತಿಸಲಾಗಿದೆ.

ಈ ವೇಳೆ ಮೂರು ಆರೋಪಿಗಳು ಪರಾರಿಯಾಗಿದ್ದು. ಆರೋಪಿಗಳಿಗಾಗಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿಗಳಿಂದ ಎರಡು ಜೀವಂತ ಮನ್ಮುಕ ಹಾವುಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಅಥಣಿ ಅರಣ್ಯ ವಲಯ ಕಚೇರಿಯಲ್ಲಿ ದೂರು ದಾಖಲಾಗಿದ್ದು. ತನಿಖೆ ಮುಂದುವರಿಸಿದ್ದಾರೆ.

 

Tags:

error: Content is protected !!