Belagavi

ಮಟಕಾ ಅಡ್ಡೆ ಮೇಲೆ ಪೊಲೀಸರ ಅಟ್ಯಾಕ್..ಇಬ್ಬರು ಆರೋಪಿಗಳು ಅಂದರ್

Share

ಮಟಕಾ ಅಡ್ಡೆ ಮೇಲೆ ಇಬ್ಬರು ಆರೋಪಿಗಳಿಗೆ ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿಯ ಶಹಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಖಾಸಭಾಗ ವಡ್ಡರ ಛಾವಣಿಯಲ್ಲಿರುವ ಶ್ರೀ.ದುರ್ಗಾದೇವಿ ಮಂದಿರ ಎದುರಿಗೆ ಸಾರ್ವಜನಿಕ ರಸ್ತೆ ಮೇಲೆ ಓಸಿ ಆಡುತ್ತಿದ್ದವರ ಮೇಲೆ ಎಸಿಪಿ, ಮಾರ್ಕೆಟ ಉಪವಿಭಾಗ ಬೆಳಗಾವಿ ಇವರ ಮಾರ್ಗದರ್ಶನದಲ್ಲಿ ಶಹಾಪೂರ ಠಾಣೆಯ ಪಿಐ ಶ್ರೀ.ರಾಘವೇಂದ್ರ ಹವಲ್ದಾರ ಮತ್ತು ಅವರ ಸಿಬ್ಬಂದಿಯವರು ದಾಳಿ ಮಾಡಿ ವಡ್ಡರಛಾವಣಿ, ಭಾರತನಗರದ ಲಕ್ಷ್ಮಣ ಗಂಗಾರಾಮ ಜಂತಿನಕಟ್ಟಿ(28) ಹಾಗೂ ವಡಗಾವಿಯ ಈರಣ್ಣ ಮಡಿವಾಳೆಪ್ಪ ಕಾಂಬಳೆ(37) ಎಂಬು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ಒಟ್ಟು 28,350 ರೂಪಾಯಿ ನಗದು ಸೇರಿದಂತೆ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಶಾಹಪುರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

 

Tags:

error: Content is protected !!