Belagavi

ಬೈಕ್‍ನಲ್ಲಿ ಬಂದು ಮಹಿಳೆಯ ಕೊರಳಿಂದ ಸರ ಕಿತ್ತುಕೊಂಡು ಪರಾರಿ

Share

ಬೆಳಗಾವಿ ಟಿಳಕವಾಡಿ ಪ್ರದೇಶದ ಪರಾಠಾ ಕಾರ್ನರ್ ಬಳಿ ತಮ್ಮ ಕಾರಿನ ಬಳಿ ನಿಂತು ತಮ್ಮ ಕುಟುಂಬದವರಿಗಾಗಿ ಕಾಯುತ್ತಿದ್ದ ಮಹಿಳೆಯ ಕೊರಳಿಂದ ಎರಡೂವರೆ ತೊಲೆ ಬಂಗಾರದ ನೆಕ್‍ಲೆಸ್‍ನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ.

: ಬೆಳಗಾವಿ ಟಿಳಕವಾಡಿ ಪ್ರದೇಶದ ಪರಾಠಾ ಕಾರ್ನರ್ ಬಳಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಹಿಳೆಯೊಬ್ಬರು ತಮ್ಮ ಕಾರಿನ ಬಳಿ ನಿಂತು ತಮ್ಮ ಕುಟುಂಬದವರಿಗಾಗಿ ಕಾಯುತ್ತಿದ್ದರು. ಇದನ್ನು ಗಮನಿಸಿದ ಬೈಕ್‍ನಲ್ಲಿ ಬಂದ ಇಬ್ಬರು ಹತ್ತಿರ ಬಂದು ಕೊರಳಲ್ಲಿದ್ದ ಚೈನ್ ಎಳೆದುಕೊಂಡು ಪರಾರಿಯಾದರು.

ಅಂದಾಜು 1.25 ಲಕ್ಷ ರೂ. ಮೌಲ್ಯದ ನೆಕ್‍ಲೆಸ್ ಅಪಹರಿಸಿದ್ದಾರೆ.ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!