Belagavi

ಬೆಳಗಾವಿ ಟಿಳಕವಾಡಿ ಪ್ರೌಢಶಾಲೆಯಲ್ಲಿ ವಿಜ್ಞಾನ ಕಾರ್ಯಾಗಾರ: ವೈಜ್ಞಾನಿಕ ಮನೋಭಾವದಿಂದ ಪ್ರಗತಿ ಸುಲಭ ಎಂದು ಪ್ರತಿಪಾದನೆ

Share

ಬೆಳಗಾವಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸೂಚನೆಯಂತೆ ಬೆಳಗಾವಿ ಠಳಕವಾಡಿ ಪ್ರೌಢಶಾಲೆಯಲ್ಲಿ ಎರಡನೇ ವಿಜ್ಞಾನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು

.
ಬೆಳಗಾವಿ ಠಳಕವಾಡಿ ಪ್ರೌಢಶಾಲೆಯಲ್ಲಿ ಎರಡನೇ ವಿಜ್ಞಾನ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಏಕನಾಥ ಪಾಟೀಲ ಟಿಳಕವಾಡಿ ಪ್ರೌಢಶಾಲೆಯ ಅಧ್ಯಕ್ಷ ಎಸ್.ವೈ.ಪ್ರಭು ಸೇರಿದಂತೆ ಮುಖ್ಯ ಅತಿಥಿಯಾಗಿದ್ದ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಟಿಳಕವಾಡಿ ಪ್ರೌಢಶಾಲೆಯ ಅಧ್ಯಕ್ಷ ಎಸ್.ವೈ.ಪ್ರಭು ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದರೆ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಶಿಕ್ಷಕರು ವಿಷಯದ ಆಳ ಜ್ಞಾನ ಹೊಂದುವುದರಿಂದ ಇದು ಸುಲಭವಾಗಲಿದೆ. ವ್ಯಕ್ತಿತ್ವವೇ ಪ್ರಯೋಗಶಾಲೆಯಾದರೆ ಮಕ್ಕಳು ನಮ್ಮನ್ನು ಅನುಕರಿಸುತ್ತಾರೆ ಎಂದರು.

ಕರ್ನಾಟಕ ರಾಜ್ಯ ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಏಕನಾಥ ಪಾಟೀಲ ಮಾತನಾಡಿ, ವಿಷಯದಲ್ಲಿ ಆಸಕ್ತಿ ಬೆಳೆಸಿದರೆ ಸಂಶೋಧಕ, ಚಿಕಿತ್ಸಕ ಬುದ್ಧಿ ಬೆಳವಣಿಗೆಯಾಗುತ್ತದೆ. ಹೀಗೆ ಮಾಡುವುದರಿಂದ ಸಮಗ್ರ ಬೆಳವಣಿಗೆ ಸುಲಭವಾಗಿ ಜೀವನದ ಬಗ್ಗೆ ಧನಾತ್ಮಕ ಮನೋಭಾವ ಬೆಳೆಯಲು ಸಾಧ್ಯ ಎಂದರು.

ಟಿಳಕವಾಡಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಆರ್.ಆರ್.ಕುಡ್ತರಕರ, ಸಮನ್ವಯಾಧಿಕಾರಿ ಸುರೇಶ ಕಲ್ಲೇಕರ, ನಗರ ವಿಜ್ಞಾನ ಶಿಕ್ಷಕರ ಸಂಘಟನೆಯ ಅಧ್ಯಕ್ಷ ಎಸ್.ಎಂ.ಜೋಷಿ ಮತ್ತಿತರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

 

Tags:

error: Content is protected !!