Belagavi

ಬೆಳಗಾವಿ ಜಿಲ್ಲೆ ಮೂರಾದರೆ ಆಡಳಿತಕ್ಕೆ ಅನುಕೂಲ, ಅದು ಬೇಗ ಆಗಲಿ: ಶಾಸಕ ಸತೀಶ ಜಾರಕಿಹೊಳಿ

Share

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇನ್ನೂ ಆಗಿಲ್ಲ. ಜಿಲ್ಲೆಯ ಶಾಸಕರು ಸಭೆ ಸೇರಿ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ, ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರವೂ ಸೇರಿ ಎಲ್ಲ ಕಡೆಗೂ ಕಾಂಗ್ರೆಸ್ ಗಟ್ಟಿಯಾಗಿದೆ, ಗೆಲ್ಲಲು ಶಕ್ತವಾಗಿದೆ, ಇನ್ನು ಬೆಳಗಾವಿ ಜಿಲ್ಲೆ ಮೂರಾದರೆ ಆಡಳಿತಕ್ಕೆ ಅನುಕೂಲವಾಗಲಿದ್ದು, ಅದು ಬೇಗ ಆಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಜಿಲ್ಲೆಯ ಮುಖಂಡರೇ ಆಯ್ಕೆ ಮಾಡಬೇಕು. ಇನ್ನೊಂದು ಮೂರು ಬಾರಿ ಬೈಟಕ್ ನಡೆಸಿ, ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅವರ ಪಕ್ಷದ ಗೆಲುವಿನ ಬಗ್ಗೆ ಉಸ್ತುವಾರಿ ಸಚಿವರು ಏನೇ ಹೇಳಿರಲಿ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮೇಡಂ ತಮ್ಮ ಕ್ಷೇತ್ರದಲ್ಲಿ ಗಟ್ಟಿಯಾಗಿದ್ದಾರೆ. ಗೆಲ್ಲಲು ಸಮರ್ಥರಾಗಿದ್ದಾರೆ, ಕಾಂಗ್ರೆಸ್‍ಗೆ ಅಲ್ಲಿ ಗಟ್ಟಿ ನೆಲೆ ಇದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಸಲು ನಾವು ರೆಡಿಯಾಗಿದ್ದೇವೆ ಎಂದರು.

ಇನ್ನು ರಾಜಕಾರಣಕ್ಕೆ ಮಕ್ಕಳನ್ನು ಕರೆತರುವ ಮೊದಲು ಅವರಿಗೆ ಸೂಕ್ತ ತರಬೇತಿ ಆಗಬೇಕು. ಈಗ ಅವರಿಗೆ ವಾರಕ್ಕೊಮ್ಮೆ ರಾಜಕಾರಣದ ತರಬೇತಿ ನಡೆಯುತ್ತಿದೆ. ಅವರಿನ್ನೂ ಪ್ರೊಬೆಷನರಿ ಪೀರಿಡ್‍ನಲ್ಲಿದ್ದಾರೆ. ಅವರ ಸಾಮಥ್ರ್ಯದ ಮೇಲೆ ಅವರು ಮುಂದೆ ಬರುತ್ತಾರೆ ಎಂದು ಶಾಸಕ ಸತೀಶ ಜಾರಕಿಹೊಳಿ, ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆ ಸೂಕ್ಷ್ಮ ಸುಳಿವು ನೀಡಿದರು.

ಇನ್ನು ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. ಅದು ವಿಭಜನೆಯಾದರೆ ಆಡಳಿತಕ್ಕೆ ಅನುಕೂಲವಾಗುತ್ತದೆ. ಮೊದಲು ತಾಲೂಕನ್ನಾದರೂ ಮಾಡಲಿ, ಜಿಲ್ಲೆಯನ್ನಾದರೂ ಮಾಡಲಿ. ಒಟ್ಟಿನಲ್ಲಿ ಜಿಲ್ಲೆ ಮೂರು ಭಾಗ ವಿಭಜನೆಯಾಗಿ ಜನರಿಗೆ ಅನುಕೂಲವಾಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.

ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ರಾಜಕಾರಣ, ಪ್ರಸಕ್ತ ವಿದ್ಯಮಾನ, ಜಿಲ್ಲೆ ವಿಭಜನೆ, ಮಕ್ಕಳ ರಾಜಕಾರಣ ಪ್ರವೇಶದ ಬಗ್ಗೆ ಶಾಸಕ ಸತೀಶ ಜಾರಕಿಹೊಳಿ ಹಲವು ವಿಚಾರಗಳನ್ನು ಹಂಚಿಕೊಂಡರು.

Tags:

error: Content is protected !!