Belagavi

ಬೆಳಗಾವಿಯಿಂದ 8 ಜಿಲ್ಲೆಗಳಿಗೆ ಕೊರೊನಾ ವ್ಯಾಕ್ಸಿನ್ ಸರಬರಾಜು..ಲಸಿಕೆ ವಿತರಣೆಗೆ ಎಲ್ಲ ಸಿದ್ಧತೆ..ಡಿಎಚ್‍ಓ ಡಾ.ಎಸ್.ವ್ಹಿ.ಮುನ್ಯಾಳ

Share

ಬೆಂಗಳೂರಿನಿಂದ ಬೆಳಗಾವಿಗೆ ಏರ್‍ಲಿಫ್ಟ್ ಮೂಲಕ ಕೊರೊನಾ ವ್ಯಾಕ್ಸಿನ್ ಬರುತ್ತದೆ. ನಂತರ ಬೆಳಗಾವಿಯಿಂದ 8 ಜಿಲ್ಲೆಗಳಿಗೆ ವ್ಯಾಕ್ಸಿನೇಟರ್ ವಾಹನಗಳ ಮೂಲಕ ವ್ಯಾಕ್ಸಿನ್ ಸರಬರಾಜು ಮಾಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಡಿಎಚ್‍ಓ ಡಾ.ಎಸ್.ವ್ಹಿ.ಮುನ್ಯಾಳ ತಿಳಿಸಿದ್ದಾರೆ.

ಶನಿವಾರ ಬೆಳಗಾವಿಯ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಎಚ್‍ಓ ಡಾ.ಎಸ್.ವ್ಹಿ.ಮುನ್ಯಾಳ ಕೊರೊನಾ ವ್ಯಾಕ್ಸಿನ್ ಸ್ಟೋರೇಜ್ ಬೆಳಗಾವಿಯಲ್ಲಿಯೇ ಮಾಡಲಾಗುತ್ತಿದೆ. ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ, ಉತ್ತರಕನ್ನಡ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಗೆ ಇಲ್ಲಿಂದಲೇ ವ್ಯಾಕ್ಸಿನೇಟರ್ ವಾಹನದ ಮೂಲಕ ವ್ಯಾಕ್ಸಿನ್ ಸರಬರಾಜು ಮಾಡಲಾಗುತ್ತದೆ ಎಂದು ಹೆಚ್ಚಿನ ಮಾಹಿತಿ ನೀಡಿದರು.

ಮುಂದುವರಿದು ಮಾತನಾಡಿದ ಅವರು ಮೂರು ಹಂತಗಳಲ್ಲಿ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದೆ. ಮೊದಲ ಹಂತಕ್ಕೆ ಈಗ ನಾವು ಹೋಗುತ್ತಿದ್ದು, 30 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರ ಹೆಸರು ನೋಂದಣಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 10 ಕೇಂದ್ರಗಳಲ್ಲಿ ವ್ಯಾಕ್ಸಿನ್ ಡ್ರೈರನ್ ಮಾಡಿದ್ದೇವೆ. ಮೊದಲ ಕೋಣೆಯ ವೇಟಿಂಗ್ ರೂಮ್‍ನಲ್ಲಿ ರಜಿಸ್ಟ್ರೇಶನ್, ಎರಡನೇ ಕೋಣೆಯಲ್ಲಿ ಲಸಿಕೆ ಕೊಡುವ ಕೋಣೆ, ಮೂರನೇ ಕೋಣೆಯಲ್ಲಿ ಅರ್ಧ ಗಂಟೆ ಆಬ್ಸರ್ವೇಶನ್ ಮಾಡಲಾಗುತ್ತದೆ. ಅಲ್ಲಿ ಅಡ್ಡಿಪರಿಣಾಮಗಳ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತದೆ. ಮುಂದೆ 28 ದಿನಗಳ ಬಳಿಕ ಎರಡನೇ ಡೋಸ್‍ಗೆ ಬರುವ ಬಗ್ಗೆ ಮಾಹಿತಿ ನೀಡುವ ಕುರಿತು ಅಣಕು ಪ್ರದರ್ಶನವನ್ನು ಈಗಾಗಲೇ ಯಶಸ್ವಿಯಾಗಿ ಮಾಡಲಾಗಿದೆ ಎಂದು ಹೇಳಿದರು.

ಕೊರೊನಾ ವ್ಯಾಕ್ಸಿನ್ ಸಂಗ್ರಹದ ಕುರಿತು ಮಾತನಾಡಿದ ಡಿಎಚ್‍ಓ ಡಾ.ಎಸ್.ವ್ಹಿ.ಮುನ್ಯಾಳ ಲಸಿಕೆ ಇಡಲು ಎರಡು ದೊಡ್ಡ ವಾಕ್ಯುಮ್ ರೂಮ್‍ಗಳನ್ನು ನಿಗದಿಪಡಿಸಿದ್ದೇವೆ. ಅಲ್ಲಿ 2ರಿಂದ8 ಡಿಗ್ರಿ ಸೆಲ್ಸಿಯಸ್ ವಾತಾವರಣವಿದೆ. 32 ಸಾವಿರ ಲೀಟರ್‍ನಷ್ಟು ಸಾಮಥ್ರ್ಯದ ಕೋಲ್ಡ್ ಸ್ಟೋರೇಜ್‍ಗೆ ಸ್ಥಳಾವಕಾಶವಿದೆ. ನಮಗೆ ಕೇವಲ 16 ಸಾವಿರ ಲೀಟರ್‍ನಷ್ಟು ಮಾತ್ರ ಬೇಕಾಗುತ್ತದೆ. ಇನ್ನು ಎರಡು ವಾಕ್ಯೂಮ್ ಕೂಲರ್‍ಗಳಲ್ಲಿ 32 ಲಕ್ಷ ಡೋಸ್‍ಗಳನ್ನು ಸಂಗ್ರಹ ಮಾಡಬಹುದಾಗಿದೆ. ಇನ್ನೆರಡು ವಾಕ್ಯೂಮ್ ರೂಮ್‍ಗಳು ಕೇಂದ್ರ ಸರ್ಕಾರದಿಂದ ಬರುತ್ತಿದೆ. ಅದನ್ನು ಬಿಟ್ಟು 180 ಕೋಲ್ಡ್ ಸ್ಟೋರೇಜ್‍ಗಳು ಮಂಜೂರಾಗಿವೆ. ಅದರಲ್ಲಿ ಈಗಾಗಲೇ 80 ಬಂದಿವೆ. ಮುಂದೆ ಮತ್ತೆ 80 ಬರುತ್ತಿದ್ದಂತೆ ಅವುಗಳನ್ನು ಹಂಚಿಕೆ ಮಾಡುತ್ತೇವೆ. ಈಗ ಇರುವ ವ್ಯಾಕ್ಸಿನ್ ಬಿಟ್ಟು ಹೆಚ್ಚುವರಿಯಾಗಿ 32 ಲಕ್ಷ ಡೋಸ್ ಲಸಿಕೆ ಇಡುವ ಸಾಮಥ್ರ್ಯ ನಮ್ಮಲ್ಲಿದ್ದು ಲಸಿಕೆ ಸಂಗ್ರಹಕ್ಕೆ ಯಾವದೇ ರೀತಿ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ ಕೊರೊನಾ ಲಸಿಕೆ ನೀಡಲು ಬೆಳಗಾವಿಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು. ಯಾವುದೇ ರೀತಿ ಅವ್ಯವಸ್ಥೆ ಆಗದಂತೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಡಿಎಚ್‍ಓ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

Tags:

error: Content is protected !!