ಬೆಳಗಾವಿ: ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ಉಪನಿಯಮ (72) ರಡಿ ರಚಿಸುವ “ಜಿಲ್ಲಾ ಮಟ್ಟದ ಸಮಿತಿ”ಯ ನಾಮ ನಿರ್ದೇಶಿತ ಸದಸ್ಯತ್ವಕ್ಕಾಗಿ ವಿಕಲಚೇತನ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಉಪನಿಯಮ (72) ರಡಿ “ಜಿಲ್ಲಾ ಮಟ್ಟದ ಸಮಿತಿ” ಯನ್ನು ಮಾನ್ಯ ಜಿಲ್ಲಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತಿದ್ದು, ಸದರಿ ಸಮಿತಿಯಲ್ಲಿ ಒಬ್ಬ ವಿಕಲಚೇತನ ವ್ಯಕ್ತಿಯನ್ನು ಜಿಲ್ಲಾಧಿಕಾರಿಗಳು ನಾಮನಿರ್ದೇಶನ ಮಾಡಬೇಕಾಗಿರುತ್ತದೆ. ಕುಷ್ಠರೋಗದಿಂದ ಗುಣಮುಖರಾಗಿರುವವರು, ಆಸಿಡ್ ದಾಳಿಗೆ ತುತ್ತಾದವರು, ಹಿಮೋಫಿಲಿಯ, ತ್ಯಾಲೇಸೀಮಿಯ, ಸಿಕ್ಲಸೆಲ್ ಎನೀಮಿಯ ಅಂತಹ ಆಸಕ್ತಿಯುಳ್ಳ ವಿಕಲಚೇತನ ವ್ಯಕ್ತಿಗಳು ಜನೇವರಿ 31.2021ರ ಒಳಗಾಗಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕಛೇರಿಗೆ ಸಲ್ಲಿಸಲು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ:0831-2476096/7 ಅಥವಾ ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂ. ಸಂಪರ್ಕಿಸಲು ಪ್ರಕಟನೆಯಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ..